ಚಿಕಿತ್ಸೆಗಾಗಿ ಸುಜೀಂದ್ರನಿಗೆ ಧನಸಹಾಯ
ಕೋಟ: ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಮಣೂರು ಪಡುಕೆರೆಯ 9 ವರ್ಷದ ಬಾಲಕ ಸುಜೀಂದ್ರನಿಗೆ ಕೋಟ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಇತ್ತೀಚೆಗೆ ಧನಸಹಾಯ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಜಾಗರಣಾ ವೇದಿಕೆಯ ಅಧ್ಯಕ್ಷ ಸುರೇಶ್ ಸಮತಾ, ತಾಪಂ ಸದಸ್ಯ ರಾಘವೇಂದ್ರ ಕಾಂಚನ್, ರವಿ ಕುಂದರ್, ನಾಗೇಶ್ ಪೂಜಾರಿ, ರತ್ನಾಕರ ಬಾರಿಕೆರೆ ಮತ್ತು ಚಂದ್ರ ಬಾರಿಕೆರೆ ಮುಂತಾದವರು ಉಪಸ್ಥಿತರಿದ್ದರು.