ಕೆಟ್ಟು ಹೋಗಿರುವ ದಾರಿದೀಪ: ಮೆಸ್ಕಾಂ ನಿರ್ಲಕ್ಷ್ಯ ಆರೋಪ
ಕಾರ್ಕಳ: ನಗರದ ಪುರಸಭಾ ವ್ಯಾಪ್ತಿಯ ಅನಂತಶಯನ ಹಾಗೂ ಇನ್ನಿತರ ಕಡೆಗಳಲ್ಲಿ ದಾರಿ ದೀಪ ಹಲವು ದಿನಗಳಿಂದ ಕೆಟ್ಟು ಹೋಗಿದ್ದರೂ ದುರಸ್ತಿ ಪಡಿಸಲು ಮೆಸ್ಕಾಂ ಮುಂದಾಗಿಲ್ಲ.
ನಗರದ ಅನಂತಶಯನದ ಬಳಿ ಇರುವ ಮುಖ್ಯ ದಾರಿದೀಪ ಕೆಟ್ಟು ಹೋಗಿದ್ದು, ರಾತ್ರಿ ಕತ್ತಲು ಕವಿದ ವಾತಾವರಣ ಕಳ್ಳರಿಗೆ ವರದಾನವಾಗಿದೆ. ಕೆಲವೆಡೆ ರಾತ್ರಿ ಹೊತ್ತು ಉರಿಯಬೇಕಾಗಿದ್ದ ದಾರಿ ದೀಪಗಳು ಹಗಲಲ್ಲಿಯೇ ಉರಿಯುತ್ತಿವೆ. ವಿದ್ಯುತ್ ವ್ಯರ್ಥವಾಗುತ್ತಿರುವುದನ್ನು ಹಲವು ಬಾರಿ ಮೆಸ್ಕಾಂ ಇಲಾಖೆಯ ಗಮನಕ್ಕೆ ತಂದರೂ ಏನೂ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.