ಕೋಟ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಕಿಮ್ಮನೆ ಭೇಟಿ
ಕೋಟ: ಪ್ರಾಥಮಿಕ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರು ಕೋಟ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಇತ್ತೀಚೆಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ ಕುಂದರ್, ಕಾರ್ಯದರ್ಶಿ ಗೋಪಾಲ ಬಂಗೇರ, ಸ್ಥಾನೀಯ ಸಮಿತಿ ಅಧ್ಯಕ್ಷರಾದ ಅಚ್ಯುತ ಪೂಜಾರಿ, ಚಂದ್ರಶೇಖರ ಶೆಟ್ಟಿ, ಮೋಸೆಸ್ ರೋಡಿಗ್ರಸ್, ನೆಡೂರು ನಿತ್ಯಾನಂದ ಶೆಟ್ಟಿ, ಕಿಸಾನ್ ಸಂಘದ ಅಧ್ಯಕ್ಷ ಜಯರಾಮ ಶೆಟ್ಟಿ, ಸ್ಥಳೀಯರಾದ ವಿಠಲ ಭಂಡಾರಿ, ರವಿ ಕಾಮತ್, ದಿನೇಶ್ ಬಂಗೇರ, ಬಸವ ಪೂಜಾರಿ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಸದಸ್ಯರಾದ ಶಿವ ಪೂಜಾರಿ, ನಾಗೇಂದ್ರ ಪುತ್ರನ್ ಇದ್ದರು.