ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಜಿನಾಮೆ
ಕಾರ್ಕಳ: ಕಳೆದ ಹಲವು ವರ್ಷಗಳಿಂದ ಕಾರ್ಕಳ ತಾಲೂಕು ಬ್ಲಾಕ್ ಕಾಂಗ್ರೆಸಿನ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಜೇಶ್ ಶೆಣೈ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. 2008ರಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಇವರು ವಿಧಾನಸಭಾ, ಲೋಕಸಭಾ ಉಪ ಚುನಾವಣೆ ಹಾಗೂ ಬೂತ್ ಮಟ್ಟದ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಇಂದು ಕವನ ಸಂಕಲನ ಬಿಡುಗಡೆ
ಉಡುಪಿ: ಇಲ್ಲಿನ ಪೂರ್ಣಪ್ರಜ್ಞ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಪ್ರಜ್ಞಾ ಹಾಲ್‌ನಲ್ಲಿ 'ಬೇಲಿ ಮೇಲಿನ ಹೂ' ಎಂಬ ಕವನ ಸಂಕಲನದ ಲೋಕಾರ್ಪಣಾ ಕಾರ್ಯಕ್ರಮವು ಅ. 9 ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಕವನ ಸಂಕಲನ ರಚನಕಾರ ನಾಗೂರು ಗಿರೀಶ್ ಐತಾಳ್ ತಿಳಿಸಿದರು. ಮಂಗಳವಾರ ನಡೆದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕವನ ಸಂಕಲವನ್ನು ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ ಅನಾವರಣಗೊಳಿಸಲಿದ್ದಾರೆ. ಪುಸ್ತಕಕ್ಕೆ ಸಂಬಂಧಿಸಿದ ಮೈಮನ ವೆಬ್‌ಸೈಟನ್ನು ವಿಜಯಬ್ಯಾಂಕಿನ ನಿರ್ದೇಶಕ ಎಚ್. ಹರೀಶ್ ಬಲ್ಲಾಳ ಲೋಕಾರ್ಪಣೆ ಮಾಡಲಿರುವರು. ಮುಖ್ಯ ಅತಿಥಿಗಳಾಗಿ ಬಸ್ರೂರು ಶಾರದಾ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ಕನರಾಡಿ ವಾದಿರಾಜ್ ಭಟ್, ಪೂರ್ಣಪ್ರಜ್ಞ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಪ್ರಾಂಶುಪಾಲ ಎಂ.ಆರ್. ಹೆಗಡೆ ಪಾಲ್ಗೊಳ್ಳಲಿರುವರು ಎಂದು ತಿಳಿಸಿದರು.
ಜೇಸಿಐನಿಂದ ವಿವಿಧ ಸ್ಪರ್ಧೆ
ಉಡುಪಿ: ಜೆಸಿಐ ಬೆಳ್ಮಣ್‌ನ ಜೇಸಿ ಸಪ್ತಾಹ ಅಂಗವಾಗಿ ಪುನಾರುಕೆರೆಯ ಸ.ಹಿ.ಪ್ರಾ. ಶಾಲೆಯ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ವಿವಿಧ ಸ್ಪರ್ಧೆಗಳನ್ನು ಬೆಳ್ಮಣ್ ಗ್ರಾಪಂ ಪಿಡಿಒ ಶೇಖರ್ ನಾಯಕ್ ಉದ್ಘಾಟಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸತೀಶ್, ಉದ್ಯಮಿ ನಿತ್ಯಾನಂದ ಶೆಟ್ಟಿ ಪೆರಲ್ಪಾದೆ, ಮುಖ್ಯ ಶಿಕ್ಷಕ ದೇವದಾಸ್ ಪಾಟ್ಕರ್, ಗ್ರಾಪಂ ಸದಸ್ಯೆ ಗೀತಾ ಪ್ರಭು, ಇತರರು ಇದ್ದರು.