ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಸಿದ್ದರಾಮಯ್ಯ ಶೀಘ್ರ ಪದಚ್ಯುತಿ: ಡೀವಿ ಭವಿಷ್ಯ

Mainashree
Updated On : 10 Oct 2013, 12:48 pm

ಉಡುಪಿ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪಕ್ಷದೊಳಗೆ ಎದ್ದಿರುವ ಭಿನ್ನಮತಕ್ಕೆ ಖುದ್ದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಪರಮೇಶ್ವರ್ ಅವರೇ ಎಣ್ಣೆ- ತುಪ್ಪ ಸುರಿಯುತ್ತಿದ್ದಾರೆ. ಆದ್ದರಿಂದ ಸಿದ್ದರಾಮಯ್ಯ ಇನ್ನು ತುಂಬ ದಿನ ಮುಖ್ಯಮಂತ್ರಿಯಾಗಿ ಉಳಿಯೋದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಡಿ.ವಿ. ಸದಾನಂದಗೌಡ ಭವಿಷ್ಯ ನುಡಿದಿದ್ದಾರೆ. ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಸಿದ್ದರಾಮಯ್ಯ ವಿರುದ್ಧ ಶಾಸಕರು ಪಕ್ಷದ ವರಿಷ್ಠರಿಗೆ ಪತ್ರ ಬರೆದಿರುವುದು ಬಹಳ ಹಳೆಯ ವಿಷಯ. ಯಾವಾಗ ಸಿದ್ದರಾಮಯ್ಯ, ಪರಮೇಶ್ವರ್ ಅವರನ್ನು ಅವರ ಸ್ವಂತ ಕ್ಷೇತ್ರದಲ್ಲಿ ಸೋಲಿಸಿದ್ದಾರೆ ಅಂತ ಗೊತ್ತಾಯಿತೋ ಆಗಲೇ ಈ ಭಿನ್ನಮತದ ಪತ್ರ ಸಿದ್ಧವಾಗಿತ್ತು. ಆಗ ಪತ್ರಕ್ಕೆ ಸಹಿ ಹಾಕಿರುದರು 21 ಶಾಸಕರು. ಈಗ ಪತ್ರ ಬರೆದರೆ 71 ಮಂದಿ ಶಾಸಕರು ಸಿದ್ದರಾಮಯ್ಯ ವಿರುದ್ಧ ಸಹಿ ಮಾಡಲು ಸಿದ್ಧರಿದ್ದಾರೆ' ಎಂದು ಡಿವಿಎಸ್ ಹೇಳಿದರು.
ಕನಿಷ್ಠ ಶಾಸಕರೂ ಅಲ್ಲದ ಪರಮೇಶ್ವರ್ ಸರ್ಕಾರದ ಮೇಲೆ ಹತೋಟಿ ಸಾಧಿಸಲು ಮಾಡುತ್ತಿರುವ ಯತ್ನ, ಅದಕ್ಕಾಗಿ ಸಮನ್ವಯ ಸಮಿತಿ ರಚನೆ ಮಾಡಿರುವುದು, ಆ ಸಮಿತಿಗೆ ಡಿ.ಕೆ. ಶಿವಕುಮಾರ್ ಅವರನ್ನು ಸದಸ್ಯರನ್ನಾಗಿ ಮಾಡಿರುವುದು, ಇವೆಲ್ಲವೂ ಸಿದ್ದರಾಮಯ್ಯ ವಿರುದ್ಧ ಪರಮೇಶ್ವರ್ ಮಾಡುತ್ತಿರುವ ತಂತ್ರಗಳಾಗಿವೆ ಎಂದು ಹೇಳಿದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement