ತೆಂಕಪೇಟೆ ಶಾರದಾ ಮಹೋತ್ಸವ ಆರಂಭ
ಉಡುಪಿ: ಇಲ್ಲಿನ ತೆಂಕಪೇಟೆಯ ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನ ನವರಾತ್ರಿಯ ಅಂಗವಾಗಿ ಗುರುವಾರ ಬೆಳಗ್ಗೆ 10.30ಕ್ಕೆ ಶ್ರೀಶಾರದಾ ದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು. ನಂತರ ಸಂಜೆ ಜಿ.ಎಸ್.ಬಿ. ಮಹಿಳಾ ಮಂಡಳಿಯ ವತಿಯಿಂದ ಶ್ರೀದೇವಿಯ ಸನ್ನಿಧಿಯಲ್ಲಿ ಲಲಿತಾಪಂಚಮಿ, ಸಾಮೂಹಿಕ ಲಕ್ಷ ಕುಂಕುಮಾರ್ಚನೆ ಜರುಗಿತು. ಒಟ್ಟು 6 ದಿನಗಳ ಇಲ್ಲಿ ಶಾರದಾ ಮಹೋತ್ಸವ ಜರಗಲಿರುವುದು. ಈ ಸಂದರ್ಭದಲ್ಲಿ ದೇವಿಯ ಸನ್ನಿಧಿಯಲ್ಲಿ ಮಧ್ಯಾಹ್ನ ಹಾಗೂ ಸಂಜೆಯ ಕಾಲದಲ್ಲಿ ವಿಶೇಷ ಭಜನೆ ಜರಗಲಿದೆ. ಇಂದು ಸಾಮೂಹಿಕ ದುರ್ಗಾ ನಮಸ್ಕಾರ, ನಾಳೆ ಜಿ.ಎಸ್.ಬಿ. ಯುವಕ ಮಂಡಲದ ವಾರ್ಷಿಕೋತ್ಸವ, ಭಾನುವಾರ ದೇವಿ ಸನ್ನಿಧಿಯಲ್ಲಿ ಚಂಡಿಕಾಹವನ ಜರಗಲಿರುವುದು. ಸೋಮವಾರ ಸಂಜೆ 6 ಗಂಟೆಗೆ ಶ್ರೀಶಾರದಾ ದೇವಿ ವಿಗ್ರಹದ ವಿಸರ್ಜನೆಯ ಶೋಭಾಯಾತ್ರೆ ಜರಗಲಿರುವುದು.