ಪ್ರಭಾಕರ ಕೋಟ್ಯಾನ್ ಉಚ್ಚಾಟನೆ
ಉಡುಪಿ: ಕಾಪು ವಿಧಾನಸಭೆ ಕ್ಷೇತ್ರದ ಕೋಟೆ ಸ್ಥಾನೀಯ ಸಮಿತಿ ವ್ಯಾಪ್ತಿಯ ಜಿಲ್ಲಾ ಯುವಮೋರ್ಚಾ ಕಾರ್ಯದರ್ಶಿ ಪ್ರಭಾಕರ ಕೋಟ್ಯಾನ್ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವುದರಿಂದ ಅವರನ್ನು ಪಕ್ಷದ ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ, ಕಾಪು ವಿಧಾನಸಭೆ ಕ್ಷೇತ್ರದ ಅಧ್ಯಕ್ಷರ ಕೋರಿಕೆ ಮೇರೆಗೆ ಅವರನ್ನು ಬಿಜೆಪಿಯಿದಿಂದ 6 ವರ್ಷ ಕಾಲ ಉಚ್ಛಾಟಿಸಲಾಗಿದೆ ಎಂದು ಜಿಲ್ಲಾಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.