ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ವೈಭವದ ತಿಥಿಯಿಂದ ಲಾಭ ಇಲ್ಲ: ಡಾ. ಭಂಡಾರಿ

Lingaraj Badiger
Updated On : 11 Oct 2013, 11:46 am

ಉಡುಪಿ: ವೃದ್ಧರನ್ನು ಬದುಕಿರುವಾಗ ಅವರನ್ನು ಸರಿಯಾಗಿ ನೋಡಿಕೊಳ್ಳದೇ ಅವರು ಸತ್ತ ಮೇಲೆ ಅವರ ತಿಥಿಯನ್ನು ವೈಭವದಿಂದ ಆಚರಿಸುವುದರಿಂದ ಯಾವ ಪ್ರಯೋಜನವೂ ಇಲ್ಲ. ವಯಸ್ಸಾದವರು ಬದುಕಿರುವಾಗಲೇ ಪ್ರೀತಿಯಿಂದ ಅವರ ಸೇವೆ ಮಾಡಬೇಕು, ಇದು ಕಿರಿಯರ ಕರ್ತವ್ಯ ಎಂದು ಹಿರಿಯ ಮನೋವೈದ್ಯ, ಡಾ. ಎ. ವಿ. ಬಾಳಿಗ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ. ಪಿ. ವಿ. ಭಂಡಾರಿ ಸಲಹೆ ನೀಡಿದ್ದಾರೆ.
ಅವರು ಗುರುವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಬ್ರಹ್ಮಗಿರಿಯ ಐ.ಎಂ.ಎ. ಸಭಾಭವನದಲ್ಲಿ ನಡೆದ 'ವಿಶ್ವ ಮಾನಸಿಕ ಆರೋಗ್ಯ ಸಪ್ತಾಹ ಆಚರಣೆ ಕಾರ್ಯಕ್ರಮ'ದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಿರಿಯ ನಾಗರಿಕರು ಕೂಡ ಯೋಚಿಸುವ ರೀತಿಯಲ್ಲಿ ಮತ್ತು ಜೀವನ ಶೈಲಿಯಲ್ಲಿ ಬದಲಾವಣೆ ತಂದುಕೊಳ್ಳುವುದು ಅಗತ್ಯ, ಅವರು ಏಕಾಂಗಿತನ, ಖಿನ್ನತೆಗೆ ತುತ್ತಾಗುವುದರ ಜೊತೆಗೆ ನೆನಪಿನ ಶಕ್ತಿ ಕಡಿಮೆಯಾಗುತ್ತದೆ. ಹೀಗಿರುವಾಗ ಆದಷ್ಟೂ ವ್ಯಾಯಮಾ, ಡಯೆಟ್ ಮಾಡಬೇಕು ಹಾಗೂ ಸದಾ ಸಂತೋಷದಿಂದ ಇರಬೇಕು ಎಂದರು.
ಈ ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮುಖ್ಯ ನಾಯಿಕ ದಂಡಾಧಿಕಾರಿ ನಾಗಜ್ಯೋತಿ ಕೆ. ಉದ್ಘಾಟಿಸಿದರು.
 ಜಿಲ್ಲಾ ಆಸ್ಪತ್ರೆ ಮನೋವೈದ್ಯ ಡಾ. ವಾಸುದೇವ ಎಸ್. ಮಾತನಾಡಿ 60 ವರ್ಷ ಮೇಲ್ಪಟ್ಟವರಲ್ಲಿ ಶೇ 15 ರಿಂದ 20 ರಷ್ಟು ಮಂದಿ ಯಾವುದಾದರೊಂದು ಮಾನಸಿಕ ಸಮಸೈಯಿಂದ ಬಳಲುತ್ತಿರುತ್ತಾರೆ. ವೈದ್ಯರಲ್ಲಿ ಚಿಕಿತ್ಸೆ ಪಡೆದುಕೊಂಡರೆ ಮಾತ್ರ ಉತ್ತಮ ಜೀವನಶೈಲಿ ನಿರ್ಮಾಣವಾಗಲು ಸಾಧ್ಯ ಎಂದು ತಿಳಿಸಿದರು. ಉಡುಪಿ ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ರವೀಂದ್ರ ನಾಯಕ್, ಮನೋವೈದ್ಯ ದೀಪಕ್ ಮಲ್ಯ ಇದ್ದರು. ಸಿ.ಎಸ್.ರಾವ್ ಸ್ವಾಗತಿಸಿದರು. ಪದ್ಮ ಹಾಗೂ ಪ್ರಭಾ ನಿರೂಪಿಸಿ ಸೌಜನ್ಯ ಶೆಟ್ಟಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement