ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಆವೆಮಣ್ಣಿನ ಕಲಾಕೃತಿ ರಚನೆ ಕಾರ್ಯಾಗಾರ

Mainashree
Updated On : 12 Oct 2013, 11:39 am

ಮಣಿಪಾಲ: ಡಾ.ಕೆ. ಶಿವರಾಮ ಕಾರಂತ ಜನ್ಮಶತಮಾನೋತ್ಸವದ ಅಂಗವಾಗಿ ಉಡುಪಿಯ ಆರ್ಟಿಸ್ಟ್ ಫೋರಂನ ಕಲಾವಿದರು ಡಾ. ಶಿವರಾಮ ಕಾರಂತ ಟ್ರಸ್ಟಿನ ಸಹಯೋಗದೊಂದಿಗೆ ಇಲ್ಲಿನ ರಾಜೀವನಗರ ಪ್ರೌಢಶಾಲೆಯಲ್ಲಿ ನಡೆಸಿದ 3 ದಿನಗಳ ಕಲಾ ಶಿಬಿರದಲ್ಲಿ ಗುರುವಾರ ಆವೆಮಣ್ಣಿನ ಕಲಾಕೃತಿ ರಚನಾ ಕಾರ್ಯಾಗಾರವನ್ನು ನಡೆಸಲಾಯಿತು. ಶಿಬಿರದಲ್ಲಿ ಭಾಗವಹಿಸಿರುವ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮಲ್ಲಿ ಅಡಗಿರುವ ಸೃಜನಶೀಲತೆಯನ್ನು ಆವೆಮಣ್ಣಿನ ಕಲಾಕೃತಿಗಳ ಮೂಲಕ ಹೊರಹಾಕಿದರು. ಕಲಾವಿದರಾದ ವೆಂಕಿ ಪಲಿಮಾರು, ಶ್ರೀನಾಥ್ ಮಣಿಪಾಲ್, ಪವನ್‌ರಾಜ್ ತರಬೇತಿ ನೀಡಿದರು. ಹಿರಿಯ ಕಲಾವಿದರಾದ ರಮೇಶ್ ರಾವ್, ಪುರುಷೋತ್ತಮ್  ಅಡ್ವೆ, ಸಕು ಪಾಂಗಳ, ಜಯವಂತ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement