ಕುಂದಾಪುರ: ಆರಾಧನೋತ್ಸವ
ಕುಂದಾಪುರ: ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಕೋಟೇಶ್ವರ ಇವರ ಜಂಟಿ ಆಶ್ರಯದಲ್ಲಿ ಅ.11ರಿಂದ 14ರವರೆಗೆ ನಡೆಯಲಿರುವ ಶ್ರೀ ಶಾರದಾ ದೇವಿಯ ಆರಾಧನೋತ್ಸವ ಶುಕ್ರವಾರ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ರಥಬೀದಿಯಲ್ಲಿ ವಿದ್ಯುಕ್ತವಾಗಿ ಆರಂಭಗೊಂಡಿತು. ಶಾರದೆಯನ್ನು ವೈಭವದ ಮೆರವಣಿಗೆಯಲ್ಲಿ ತಂದು ಪ್ರತಿಷ್ಠಾಪಿಸಲಾಯಿತು. ಈ ಸಂದರ್ಭದಲ್ಲಿ ಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ. ಪ್ರಭಾಕರ ಶೆಟ್ಟಿ ಮೂಡುಗೋಪಾಡಿ, ಕೋಟೇಶ್ವರ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ ಮಾರ್ಕೋಡು, ಉಪಾಧ್ಯಕ್ಷ ರಾಮ ನಾಯ್ಕ, ವಾದಿರಾಜ ಹೆಬ್ಬಾರ್, ರಾಜೇಶ ಶೇರಿಗಾರ್, ಕಾರ್ಯದರ್ಶಿ ವಿಶ್ವನಾಥ ಆಚಾರ್ಯ ತೆಕ್ಕಟ್ಟೆ, ಜತೆ ಕಾರ್ಯದರ್ಶಿಗಳಾದ ರವೀಂದ್ರ ದೊಡ್ಮನೆ, ಬಿ.ಎಂ. ಗುರುರಾಜ ರಾವ್, ಕೋಶಾಧಿಕಾರಿ ಸುಬ್ಬಣ್ಣ ಶೆಟ್ಟಿ ಮಾರ್ಕೋಡು ಮತ್ತಿತರರು ಇದ್ದರು.