ಬಂಟಕಲ್ಲು ಕರ್ಣಾಟಕ ಬ್ಯಾಂಕ್‌ಗೆ 'ಎಂ.ಡಿ. ಕ್ಲಬ್ ಗೌರವ'
ಉಡುಪಿ: ತೀರಾ ಕುಗ್ರಾಮವಾಗಿದ್ದ ಇಲ್ಲಿನ ಬಂಟಕಲ್ಲಿನಲ್ಲಿ 1976ರಲ್ಲಿ ಪ್ರಾರಂಭಗೊಂಡ ಕರ್ಣಾಟಕ ಬ್ಯಾಂಕ್ ಶಾಖೆಯ 2012- 13ನೇ ಸಾಲಿನ ಅತ್ಯುತ್ತಮ ಸಾಧನೆಗಾಗಿ ಪ್ರಥಮ ಬಾರಿಗೆ 'ಎಂ.ಡಿ. ಕ್ಲಬ್ ಗೌರವ' ಪ್ರಾಪ್ತವಾಗಿದೆ.
ಇದುವರೆಗೆ ಬ್ಯಾಂಕಿನ 550 ಶಾಖೆಗಳಲ್ಲಿ 81 ಶಾಖೆಗಳಿಗೆ ಮಾತ್ರ ಈ ಗೌರವಕ್ಕೆ ಪಾತ್ರವಾಗಿವೆ.
ಮುಂಬೈಯ ಪೊವಾಯಿ ಶಾಖೆಯಲ್ಲಿ ಅಧಿಕಾರಿಯಾಗಿದ್ದ ಮೂಡುಬೆಳ್ಳೆ ಸಮೀಪದ ಮರ್ಣೆಯವರಾದ ವಿಠಲ ವಾಗ್ಲೆ ಅವರು 2011ರ ಜೂನ್ ತಿಂಗಳಲ್ಲಿ ಬಂಟಕಲ್ಲು ಶಾಖೆಗೆ ಪ್ರಬಂಧಕರಾಗಿ ಭಡ್ತಿ ಹೊಂದಿ ಜವಾಬ್ದಾರಿ ವಹಿಸಿಕೊಂಡಾಗ, ಈ ಶಾಖೆಯಲ್ಲಿ ರು. 20.24 ಕೋಟಿ ಠೇವಣಿ ಹಾಗೂ ರು. 77 ಲಕ್ಷ ಮುಂಗಡ ವ್ಯವಹಾರ ನಡೆಯುತ್ತಿತ್ತು.
ಪ್ರಸ್ತುತ ಈ ಶಾಖೆಯಲ್ಲಿ ರು. 37.35 ಕೋಟಿ ಠೇವಣಿ ಹಾಗೂ ರು. 2.69 ಕೋಟಿ ಮುಂಗಡದೊಂದಿಗೆ ವಾರ್ಷಿಕವಾಗಿ ಒಟ್ಟು ರು. 41 ಕೋಟಿ ವಹಿವಾಟು ನಡೆಸಿದೆ. ಈ ಸಾಧನೆಗಾಗಿ ಈ ಎಂ.ಡಿ. ಕ್ಲಬ್ ಗೌರವ ಲಭಿಸಿದೆ.