ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ರಾಷ್ಟ್ರೀಯ ಸ್ವಯಂ ಸೇವಕರ ಪಥಸಂಚಲನ

Mainashree
Updated On : 12 Oct 2013, 11:39 am

ಉಡುಪಿ: ಶಿರ್ವ ಸಮೀಪದ ಪದವು ಎಂ.ಎಸ್.ಆರ್.ಎಸ್. ಕಾಲೇಜಿನ ಆಂಗ್ಲ ಮಾಧ್ಯಮ ಶಾಲಾ ಸಭಾಂಗಣದಲ್ಲಿ ಜರುಗುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಥಮಿಕ ಶಿಕ್ಷಾ ವರ್ಗದ ಸ್ವಯಂ ಸೇವಕರಿಂದ ಶುಕ್ರವಾರ ಸಂಜೆ ಶಿರ್ವ ಯು.ಕೆ. ಆಚಾರ್ ವೃತ್ತದಿಂದ ಕಾಲೇಜಿನವರೆಗೆ ಘೋಷ್ ಸಹಿತ ಆಕರ್ಷಕ ಪಥಸಂಚಲನ ಜರುಗಿತು.
ಈ ಪಥಸಂಚಲನದಲ್ಲಿ ಒಟ್ಟು 348 ಶಿಕ್ಷಾರ್ಥಿಗಳು ಜೊತೆಗೆ ಪ್ರಬಂಧಕರು ಸೇರಿ ಇತರ ನೂರಕ್ಕೂ ಅಧಿಕ ಗಣವೇಷಧಾರಿಗಳು ಪಥ ಸಂಚಲನದಲ್ಲಿ ಪಾಲ್ಗೊಂಡರು. ಜಿಲ್ಲಾ ಸಂಘ ಚಾಲಕ್ ಶಂಭು ಶೆಟ್ಟಿ, ತಾಲೂಕು ಸಂಘ ಚಾಲಕ್ ತಾರನಾಥ್ ಕೊಟ್ಯಾನ್, ಶಿಬಿರ ಪ್ರಮುಖ್ ಜಗದೀಶ್ ಕಲ್ಲಡ್ಕ ಮತ್ತು ಊರಿನ ಹಿರಿಯ ಗಣ್ಯರು ಭಾಗವಹಿಸಿದರು. ಪೇಟೆಯಲ್ಲಿ ಮಾತೆಯರು, ಅಭಿಮಾನಿಗಳು, ಶ್ರೀಭಗವಧ್ವಜಕ್ಕೆ ಪುಷ್ಪಾರ್ಪಣೆ ಮಾಡಿ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement