ಕಟ್ಟಡಕ್ಕೆ ಶಿಲಾನ್ಯಾಸ
ಶಿರ್ವ: ಇಲ್ಲಿನ ಹಿಂದೂ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಅಕ್ಷರ ದಾಸೋಹ ಕಟ್ಟಡಕ್ಕೆ ಶಿರ್ವ ಗ್ರಾಪಂ ಅಧ್ಯಕ್ಷ ಹಸನಬ್ಬ ಶೇಖ್, ತಾಪಂ ಸದಸ್ಯ ಕೃಷ್ಣ ಪೂಜಾರಿ, ಜಿಪಂ ಸದಸ್ಯೆ ಐಡಾ ಗಿಬ್ಬ ಡಿಸೋಜ ಅವರು ಜಂಟಿಯಾಗಿ ಶಿಲಾನ್ಯಾಸ ನೆರವೇರಿಸಿದರು. ಈ ಸಂದರ್ಭದಲ್ಲಿ ವಿದ್ಯಾವರ್ಧಕ ಸಂಘದ ಅಡಳಿತಾಧಿಕಾರಿ ಪ್ರೊ.ವೈ. ಭಾಸ್ಕರ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲ ರಾಜಗೋಪಾಲ್, ಪ್ರೌಢ ಶಾಲಾ ಹಿರಿಯ ಸಹಾಯಕ ಕೆ. ಶ್ಯಾಮ ಭಟ್, ಗ್ರಾಪಂ ಸದಸ್ಯ ಗೋಪಾಲಕೃಷ್ಣ ಪ್ರಭು, ಅರ್ಚಕ ರಘುಪತಿ ಭಟ್, ವರದರಾಯ ನಾಯಕ್, ವಾಸು ಆಚಾರ್, ಶಕಿಲಾ ಲಿಂಗಪ್ಪ ಮುಂತಾದವರು ಉಪಸ್ಥಿತರಿದ್ದರು.