ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಡಾ. ಸಂಪದಾ ಭಟ್‌ಸಂಗೀತ ಕಛೇರಿ

Lingaraj Badiger
Updated On : 16 Oct 2013, 12:11 pm

ಕಟಪಾಡಿ: ಉದ್ಯಾವರ ಶ್ರೀ ವೀರವಿಠಲ ದೇವಳದಲ್ಲಿ ಶರನ್ನವರಾತ್ರಿ ಪ್ರಯುಕ್ತ ಜರುಗಿದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಉತ್ಸವದಲ್ಲಿ ಖ್ಯಾತ ಹಿಂದೂಸ್ತಾನಿ ಗಾಯಕಿ ಡಾ. ಸಂಪದಾ ಭಟ್ ಅವರಿಂದ ಹಿಂದೂಸ್ತಾನಿ ಹಾಗೂ ಕರ್ನಾಟಕ ಸಂಗೀತ ಕಾರ್ಯಕ್ರಮ ಜರುಗಿತು. ಉದ್ಘಾಟನೆಯನ್ನು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಕಾಸರಗೋಡು ಚಿನ್ನಾ ನೆರವೇರಿಸಿದರು. ಶುಭೋದಯ ಟ್ರಸ್ಟ್‌ನ ಅಧ್ಯಕ್ಷ ನರಸಿಂಹ ಶೆಣೈ ಇದ್ದರು. ಈ ಸಂದರ್ಭದಲ್ಲಿ ಜಯಲಕ್ಷ್ಮೀ ಕ್ಲಾತ್ ಸ್ಟೋರ್ಸ್‌ನ ಜಯಲಕ್ಷ್ಮೀ ಅವರು ಡಾ. ಸಂಪದಾ ಭಟ್  ಅವರನ್ನು ಅಭಿನಂದಿಸಿದರು. ದೇವಳದ ಆಡಳಿತ ಮೊಕ್ತೇಸರ ನಾಗೇಶ ಕಾಮತ್ ಸ್ವಾಗತಿಸಿದರು. ಎ.ಎಮ್. ಹೆಗಡೆ ನಿರೂಪಿಸಿ, ವಂದಿಸಿದರು.
ಸಂಗೀತ ಜಾತಿ, ಧರ್ಮವನ್ನು ಮೀರಿ ನಿಂತ ಕಲೆ: ಗೋಪಾಲಾಚಾರ್
ಮಣಿಪಾಲ: ಸಂಗೀತ ಜಾತಿ, ಧರ್ಮಗಳನ್ನು ಮೀರಿ ನಿಂತ ಕಲೆಯಾಗಿದೆ. ಯುವ ಜನಾಂಗ ಸಂಗೀತದಂತಹ ಉತ್ತಮ ಕಲೆಯನ್ನು ನಿರಂತರವಾಗಿ ಆಲಿಸಿ ಎಂದು ಉಡುಪಿಯ ವಾದಿರಾಜ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕ ಬಿ. ಗೋಪಾಲಾಚಾರ್ ತಿಳಿಸಿದರು. ಅವರು ಇಲ್ಲಿನ ಪರ್ಕಳದ ಕುಕ್ಕುದಕಟ್ಟೆಯಲ್ಲಿರುವ ಸರಿಗಮಭಾರತಿ ಸಂಗೀತ ವಿದ್ಯಾಲಯದಲ್ಲಿ ನಡೆದ ವಿದ್ಯಾದಶಮಿ ಸಂಗೀತೋತ್ಸವ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ, ವಿದ್ಯೆಯನ್ನು ನೀಡುವ, ಸಿದ್ಧಿಯನ್ನಾಗಿಸುವ ಪರ್ವ ಕಾಲವೇ ವಿದ್ಯಾದಶಮಿ ಎಂದರು. ಮುಖ್ಯ ಅತಿಥಿಗಳಾಗಿ ಪರ್ಕಳದ ಮಂಜುನಾಥ ಉಪಾಧ್ಯ, ಉಡುಪಿ ನಗರ ಸಭೆಯ ಉಪಾಧ್ಯಕ್ಷೆ ಅಮೃತಾ ಕೃಷ್ಣಮೂರ್ತಿ, ವಿದುಷಿ ಸರೋಜಾ ಆಚಾರ್ ಇದ್ದರು. ನಂತರದಲ್ಲಿ ಕಲಾ ವಿಮರ್ಶಕ ಈಶ್ವರಯ್ಯ ಅವರು ಸಂಗೀತ ರಸಪ್ರಶ್ನೆ ನಡೆಸಿಕೊಟ್ಟರು. ಕರ್ನಾಟಕ ಸಂಗೀತ ಗಾಯನ ಹಾಗೂ ಹಿಂದೂಸ್ಥಾನಿ ಗಾಯನ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement