ಜೇನುಕೃಷಿ ತರಬೇತಿ ಉದ್ಘಾಟನೆ
ಉಡುಪಿ: ಇಲ್ಲಿನ ಕುಕ್ಕೆಹಳ್ಳಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ 3 ದಿನಗಳ ಕಾಲ ನಡೆದ ಜೇನುಕೃಷಿ ತರಬೇತಿ ಕಾರ್ಯಕ್ರಮದ ಉದ್ಘಾಟನೆಯನ್ನು ಪೆರ್ಡೂರು ಜಿಲ್ಲಾ ಪಂಚಾಯಿತಿ ಸದಸ್ಯೆ ಗೋಪಿ ಕೆ. ನಾಯ್ಕ್ ನೆರವೇರಿಸಿದರು.
ಕುಕ್ಕೆಹಳ್ಳಿ ಗ್ರಾ.ಪಂ. ಅಧ್ಯಕ್ಷ ಕಿರಣ್ ಕುಮಾರ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಜೇನುಕೃಷಿ ತರಬೇತುದಾರ ಮುಮ್ತಾಜ್ ಅಲಿ, ಜಿಲ್ಲಾ ಪಂಚಾಯಿತಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಸದಾಶಿವ ರಾವ್, ಇಲಾಖೆಯ ಜೇನುಕೃಷಿ ಪ್ರದರ್ಶಕ ವಿ.ಕೆ. ಬೆಳ್ಳೆಪೆಮ್ಮಯ್ಯ ಇದ್ದರು.
ಆಧುನಿಕ ಜೇನು ಪೆಟ್ಟಿಗೆಯ ಪರಿಚಯ, ವಿವಿಧ ಜಾತಿಯ ಜೇನು ನೊಣಗಳು ಪರಿಚಯ, ಯಂತ್ರದ ಮೂಲಕ ಶುದ್ಧ ಜೇನು ತುಪ್ಪ ಪಡೆಯುವ ವಿಧಾನದ ಜೊತೆಗೆ ಇನ್ನಿತರ ವಿಷಯಗಳ ಬಗ್ಗೆ ಮಾಹಿತಿ ನೀಡಲಾಯಿತು.
ಸಮಾರೋಪ ಸಮಾರಂಭದಲ್ಲಿ ಕುಕ್ಕಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಿರಣ್ ಅಧ್ಯಕ್ಷತೆಯಲ್ಲಿ ಫಲಾನುಭವಿಗಳಿಗೆ ತರಬೇತಿ ಪ್ರಮಾಣಪತ್ರ ವಿತರಿಸಲಾಯಿತು.