ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ತೋಟಗಾರಿಕೆ ಇಲಾಖೆ ಸಿಬ್ಬಂದಿ ಅಮಾನತು, ತನಿಖೆ ಆರಂಭ

Mainashree
Updated On : 20 Oct 2013, 11:20 am

ಪುತ್ತೂರು: ತೋಟಗಾರಿಕೆ ಇಲಾಖೆಯಲ್ಲಿ ಗೊಬ್ಬರ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖೆ ಸಿಬ್ಬಂದಿ ಮಂಜುನಾಥ್ ಅವರನ್ನು ಅಮಾನತುಗೊಳಿಸಿ ತೋಟಗಾರಿಕೆ ಉಪನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಇದೀಗ ಈ ಪ್ರಕರಣದ ಇಲಾಖಾ ತನಿಖೆ ಆರಂಭಗೊಂಡಿದೆ.
ಪುತ್ತೂರು ತೋಟಗಾರಿಕೆ ಇಲಾಖೆಯಲ್ಲಿ ಸರ್ಕಾರದಿಂದ ಲಭ್ಯವಾಗುವ ವಿವಿಧ ಸವಲತ್ತುಗಳು ಸೂಕ್ತ ಫಲಾನುಭವಿಗಳಿಗೆ ತಲಪುತ್ತಿಲ್ಲ ಎಂಬ ದೂರು  ವ್ಯಾಪಕವಾಗಿ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಶಶಿಪ್ರಭಾ ಸಹಿತ ಇತರ ಜನಪ್ರತಿನಿಧಿಗಳು ತೋಟಗಾರಿಕೆ ಇಲಾಖೆಗೆ ಸೆ.6ರಂದು ಧಿಡೀರ್ ಭೇಟಿ ನೀಡಿ ಕಡತಗಳ ಪರಿಶೀಲನೆ ಮಾಡಿದಾಗ ಇಲಾಖೆಗೆ ಎರಡು ದಿನಗಳ ಹಿಂದಷ್ಟೇ 222 ಚೀಲ ಕಹಿಬೇವಿನ ಹಿಂಡಿ ಸರ್ಕಾರದಿಂದ ಪೂರೈಕೆ ಆಗಿತ್ತು. ಆದರೆ ಅದರಲ್ಲಿ 88 ಚೀಲ ಮಾರಾಟವಾದ ಬಗ್ಗೆ ದಾಖಲೆ ಇತ್ತು. ಉಳಿದ 134 ಚೀಲ ಪೂರೈಕೆ ಆದ ಬಗ್ಗೆ ಯಾವುದೇ ದಾಖಲೆ ಇರಲಿಲ್ಲ. ಹೀಗಾಗಿ ಇಲ್ಲಿನ ಕೃಷಿ ಸಹಾಯಕ ಅಧಿಕಾರಿ ಮಂಜುನಾಥ್ ವಿರುದ್ಧ ಕ್ರಮ ಕೈಗೊಳ್ಳಲು ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗೆ ಸೂಚನೆ ನೀಡಲಾಗಿತ್ತು. ಈ ಸಂದರ್ಭ ಜಾತಿ ನಿಂದನೆ ದೂರನ್ನು ಕೂಡ ಕೃಷಿ ಅಧಿಕಾರಿ ನೀಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement