ಬಿ.ಸಿ.ರೋಡ್: ನಾಳೆ ನುಡಿಸಿರಿ ಸಮಾಲೋಚನೆ ಸಭೆ
ಮೂಡುಬಿದಿರೆ: ಇಲ್ಲಿನ ವಿದ್ಯಾಗಿರಿಯಲ್ಲಿ ಡಿ.19ರಿಂದ 22ರ ವರೆಗೆ ನಡೆಯಲಿರುವ 'ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ 2013' ಕುರಿತ ಬಂಟ್ವಾಳ ತಾಲೂಕು ಮಟ್ಟದ ಬೃಹತ್ ಸಮಾಲೋಚನಾ ಸಭೆ 22ರಂದು ಸಂಜೆ 4ಕ್ಕೆ ಬಿ.ಸಿ.ರೋಡಿನ ರಂಗೋಲಿ ಸಭಾಂಗಣದಲ್ಲಿ ನಡೆಯಲಿದೆ.
ಸಚಿವ ಬಿ. ರಮಾನಾಥ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಸಾಹಿತಿ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ, ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಸದಾನಂದ ಪೂಂಜ, ಚಂದ್ರಪ್ರಕಾಶ್ ಶೆಟ್ಟಿ, ತುಂಗಪ್ಪ ಬಂಗೇರ, ಅಬ್ದುಲ್ ಖಾದರ್ ಗೋಳ್ತಮಜಲು, ಪದ್ಮಶೇಖರ್ ಜೈನ್, ಸುದರ್ಶನ ಜೈನ್, ಪ್ರೊ.ತುಕಾರಾಮ ಪೂಜಾರಿ, ವಲೇರಿಯನ್ ಪಿಂಟೊ, ಸೇಸಪ್ಪ ಕೋಟ್ಯಾನ್, ಕೆಯ್ಯೂರು ನಾರಾಯಣ ಭಟ್, ಜಯಾನಂದ ಪೆರಾಜೆ ಭಾಗವಹಿಸಲಿದ್ದಾರೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಪ್ರಕಟಣೆ ತಿಳಿಸಿದೆ.