ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಸುದ್ದಿ ಸಂಕ್ಷೇಪ

Mainashree
Updated On : 21 Oct 2013, 10:15 am

ಅಶೋಕ್ ಕೋಟ್ಯಾನ್ ಆಯ್ಕೆ
ಮೂಲ್ಕಿ: ಕಟೀಲು ಅಜಾರು ಬಿಲ್ಲವ ಸಮಾಜ ಸೇವಾ ಸಂಘದ ಪ್ರಸ್ತುತ ಸಾಲಿನ ಅಧ್ಯಕ್ಷರಾಗಿ ಅಶೋಕ್ ಕೋಟ್ಯಾನ್ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಈಶ್ವರ್ ಕಟೀಲು, ಉಪಾಧ್ಯಕ್ಷರಾಗಿ ಉದಯ ಕುಮಾರ್, ಪ್ರಧಾನ ಕಾರ್ಯದರ್ಶಿ ಉಮೇಶ್ ಕರ್ಕೇರ, ಕಾರ್ಯದರ್ಶಿಯಾಗಿ ಶೇಖರ ಅಮೀನ್, ಜೊತೆ ಕಾರ್ಯದರ್ಶಿಯಾಗಿ ಸಂಜೀವ ಸುವರ್ಣ, ಜಗದೀಶ್, ಕೋಶಾಧಿಕಾರಿಯಾಗಿ ದುರ್ಗಾಪ್ರಸಾದ್, ಜೊತೆ ಕೋಶಾಧಿಕಾರಿಯಾಗಿ ಉಮೇಶ್ ಅಮೀನ್, ಸಾಂಸ್ಕ್ರತಿಕ ಕಾರ್ಯದರ್ಶಿಯಾಗಿ ಗಣೇಶ್, ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ಪಜೀರ್ ಕೋಡಿ, ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಸುರೇಶ್ ಕುಮಾರ್, ಸುನೀಲ್, ಕ್ರೀಡಾ ಕಾರ್ಯದರ್ಶಿಯಾಗಿ ಪ್ರಕಾಶ್ ಆಯ್ಕೆಯಾಗಿದ್ದಾರೆ.
ಪೂರ್ವಭಾವಿ ಸಭೆ
ಮೂಲ್ಕಿ: ಕಿನ್ನಿಗೋಳಿಯ ಯುಗಪುರುಷದ ಸಭಾಭವನದಲ್ಲಿ ಜರುಗಿದ ದ.ಕ. ಜಿಲ್ಲಾ ಫೋಟೋಗ್ರಾಫರ್ಸ್ ಅಸೋಸಿಯೇಶನ್‌ನ ಮೂಲ್ಕಿ ವಲಯದ ದಶಮಾನೋತ್ಸವದ ಪೂರ್ವಭಾವಿ ಸಭೆಯನ್ನು ದಕ ಮತ್ತು ಉಡುಪಿ ಜಿಲ್ಲಾ ಫೋಟೋಗ್ರಾಫರ್ಸ್ ಅಸೋಸಿಯೇಶನ್‌ನ ಅಧ್ಯಕ್ಷ ವಾಸುದೇವ ರಾವ್ ಉದ್ಘಾಟಿಸಿದರು. ಅ.29ರಂದು ದಶಮಾನೋತ್ಸವದ ಉದ್ಘಾಟನೆಯನ್ನು ನೆರವೇರಿಸಿ ಪ್ರತಿ ತಿಂಗಳಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ನಿರ್ಧರಿಸಲಾಯಿತು. ಅಧ್ಯಕ್ಷತೆಯನ್ನು ಅಸೋಸಿಯೇಶನ್‌ನ ಮೂಲ್ಕಿ ವಲಯದ ಅಧ್ಯಕ್ಷ ರೆಫಾಯಿಲ್ ರೆಬೆಲ್ಲೊ ವಹಿಸಿದ್ದು ಕಾರ್ಯದರ್ಶಿ ಯಶವಂತ ಐಕಳ, ನಿಯೋಜಿತ ಅಧ್ಯಕ್ಷ ನವೀನ್ ಕುಮಾರ್ ಕಟೀಲು ಇದ್ದರು.
ಶ್ರದ್ಧಾಂಜಲಿ
ಸುಳ್ಯ: ಸಾಮಾಜಿಕ ಮುಂದಾಳು, ರಾಷ್ಟ್ರೀಯ ಕ್ರೀಡಾಪಟು ವಿಜಯ ರೈ ಪಾಲ್ತಾಡು ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯು ಇತ್ತೀಚೆಗೆ ಸುಳ್ಯ ಲಯನ್ಸ್ ಸೇವಾ ಸದನದಲ್ಲಿ ನಡೆಯಿತು.  ಪಿ.ಬಿ. ದಿವಾಕರ ರೈ, ಕೃಷ್ಣಪ್ರಸಾದ್ ಮಡ್ತಿಲ, ವೆಂಕಪ್ಪ ಗೌಡ, ವಿಶ್ವನಾಥ್ ರಾವ್, ಮುಸ್ತಫಾ ಕೆ.ಎಂ., ಪಡ್ಡಂಬೈಲು ವೆಂಕಟ್ರಮಣ ಗೌಡ ನುಡಿನಮನ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement