ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಗಂಗೊಳ್ಳಿ: ನೇತ್ರ ತಪಾಸಣೆ ಉಚಿತ ಶಿಬಿರ

Rashmi Kasaragodu
Updated On : 23 Oct 2013, 11:36 am

ಗಂಗೊಳ್ಳಿ: ಹುಟ್ಟಿದ ಮಗುವಿಗೂ ಕೂಡ ಕಣ್ಣಿನ ದೋಷ ಕಂಡು ಬರುತ್ತಿರುವುದರಿಂದ ಕಣ್ಣಿನ ಆರೈಕೆ ಹಾಗೂ ತಪಾಸಣೆಯನ್ನು ನಿರಂತರವಾಗಿ ಮಾಡಿಕೊಳ್ಳುತ್ತಿರಬೇಕು. ಕಣ್ಣಿನ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಲ್ಲಿ ದೃಷ್ಟಿಹೀನರಾಗುವ ಸಾಧ್ಯತೆಗಳಿವೆ. ಹೀಗಾಗಿ ಕಣ್ಣಿನ ವಿಚಾರದಲ್ಲಿ ಅಸಡ್ಡೆ ತೋರಬಾರದು ಎಂದು ಉಡುಪಿ ಪ್ರಸಾದ ನೇತ್ರಾಲಯದ ನೇತ್ರ ತಜ್ಞ ಡಾ. ಕೃಷ್ಣಪ್ರಸಾದ ಹೇಳಿದರು.
ಅವರು ಇತ್ತೀಚೆಗೆ ರೋಟರಿ ಕ್ಲಬ್ ಗಂಗೊಳ್ಳಿ, ಪ್ರಸಾದ ನೇತ್ರಾಲಯ ಉಡುಪಿ, ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್, ಉಡುಪಿ ಜಿಲ್ಲಾ ಅಂಧತ್ವ ನಿವಾರಣಾ ವಿಭಾಗ, ಶ್ರೀ ರಾಘವೇಂದ್ರ ಸ್ಪೋರ್ಟ್ಸ್ ಕ್ಲಬ್ ಗಂಗೊಳ್ಳಿ ಇವರ ಜಂಟಿ ಆಶ್ರಯದಲ್ಲಿ ಗಂಗೊಳ್ಳಿಯ ಸ.ವಿ. ಪದವಿ ಪೂರ್ವ ಕಾಲೇಜಿನ ಗೋಪಾಲ ನಾಯಕ್ ಸಭಾಂಗಣದಲ್ಲಿ ಜರಗಿದ ಉಚಿತ ನೇತ್ರ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ಉಪೇಂದ್ರ ಶೇರುಗಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ರಾಘವೇಂದ್ರ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಜಿ. ರೋಹಿದಾಸ ನಾಯಕ್, ರೋಟರಿ ಕಾರ್ಯದರ್ಶಿ ಕೆ. ರಾಮನಾಥ ನಾಯಕ್ ಇದ್ದರು.
ಮಾಜಿ ರೋಟರಿ ಜಿಲ್ಲಾ ಅಸಿಸ್ಟೆಂಟ್ ಗವರ್ನರ್ ಎಚ್. ಗಣೇಶ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಮಾರು 150 ಮಂದಿ ಶಿಬಿರದ ಪ್ರಯೋಜನ ಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement