ಆಳ್ವಾಸ್ ವಿಶ್ವ ನುಡಿಸಿರಿ: ಪೂರ್ವಭಾವಿ ಸಭೆ
ಉಡುಪಿ: ಮೂಡುಬಿದಿರೆಯಲ್ಲಿ ಡಿ. 19ರಿಂದ 22ರವರೆಗೆ ನಡೆಯುವ 'ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್' 2013ಕ್ಕೆ ಸಂಬಂಧಿಸಿ ಇಲ್ಲಿನ ಧರ್ಮಾವರಂ ಆಡಿಟೋರಿಯಂನಲ್ಲಿ ಡಾ. ಮೋಹನ್ ಆಳ್ವ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.ಅವರು ಕಳೆದ 19 ವರ್ಷಗಳಿಂದ ನಡೆಯುತ್ತಿರುವ ನುಡಿಸಿರಿ ಕಾರ್ಯಕ್ರಮದ ಬಗ್ಗೆ ವಿವರಗಳನ್ನು ನೀಡಿ ಕಾರ್ಯಕ್ರಮದ ಮಹತ್ವ, ಉದ್ದೇಶಗಳನ್ನು ಸವಿಸ್ತಾರವಾಗಿ ಸಭೆಗೆ ತಿಳಿಸಿದರು. ದಿನಕ್ಕೆ 1 ಲಕ್ಷದಂತೆ ಒಟ್ಟು ಈ ಕಾರ್ಯಕ್ರಮದ ಅವಧಿಯಲ್ಲಿ 10 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಒಟ್ಟು ಅಂದಾಜು ರು. 20 ಕೋಟಿಗೂ ಮಿಕ್ಕಿ ಖರ್ಚುವೆಚ್ಚಗಳಿವೆ. ಸುಮಾರು 4500 ಮಂದಿ ಕಲಾವಿದರು ಭಾಗವಹಿಸಲಿದ್ದಾರೆ ಎಂದರು. ಇರ್ಮಾಡಿ ತಿಮ್ಮಪ್ಪ ಹೆಗ್ಡೆ ಮತ್ತು ಡಾ.ಕೆ.ಪಿ. ಶೆಟ್ಟಿ ಇದ್ದರು. ಬ್ರಹ್ಮಾವರ ಪರಿಸರದ ವಿವಿಧ ಸಂಘಟನೆಗಳ, ಸ್ವಯಂ ಸೇವಾ ಸಂಸ್ಥೆಗಳ ನೂರಕ್ಕೂ ಪದಾಧಿಕಾರಿಗಳು, ಇದ್ದರು. ವಿರಾಸತ್ ಬ್ರಹ್ಮಾವರ ಘಟಕವನ್ನು ರಚಿಸಲು ತೀರ್ಮಾನಿಸಲಾಯಿತು. ಅದಕ್ಕಾಗಿ 40 ಸದಸ್ಯರ ಅಡ್ಹಾಕ್ (ಉಸ್ತುವಾರಿ) ಸಮಿತಿಯನ್ನು ರಚಿಸಿ ಗೌರವಾಧ್ಯಕ್ಷರಾಗಿ ಡಾ.ಕೆ.ಪಿ. ಶೆಟ್ಟಿ ಬಾಳ್ಕುದ್ರು, ಸಂಚಾಲಕರಾಗಿ ಬ್ರಹ್ಮಾವರ ಫೌಂಡೇಶನ್ ಮ್ಯಾನೇಜಿಂಗ್ ಟ್ರಸ್ಟಿ ಬಿ. ಗೋವಿಂದರಾಜ್ ಹೆಗ್ಡೆ ಇವರನ್ನು ಆರಿಸಲಾಯಿತು. ಅ. 26ರಂದು ಪೂರ್ಣ ಪ್ರಮಾಣದ ಘಟಕದ ಪದಾಧಿಕಾರಿಗಳ ಆಯ್ಕೆಗೆ ತೀರ್ಮಾನಿಸಲಾಯಿತು.