ಐಸಿಸಿಆರ್ಗೆ ಉಪ್ಪಿನಕುದ್ರು ಕಾಮತ್ ಆಯ್ಕೆ
ಉಡುಪಿ: ನವದೆಹಲಿಯ ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಷನ್ಸ್ (ಐಸಿಸಿಆರ್) ಇದರ ಸದಸ್ಯರಾಗಿ ಉಡುಪಿಯ ಯಕ್ಷಗಾನ ಗೊಂಬೆಯಾಟ ಕಲಾವಿದ ಉಪ್ಪಿನಕುದ್ರು ಭಾಸ್ಕರ್ ಕೊಗ್ಗ ಕಾಮತ್ 2ನೇ ಬಾರಿ ಆಯ್ಕೆಯಾಗಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿಯ ನಿರ್ದೇಶಕರಾಗಿ ಅಳಿವಿನಂಚಿನಲ್ಲಿರುವ ಯಕ್ಷಗಾನ ಗೊಂಬೆಯಾಟ ಕಲೆಗೆ ಹೊಸ ಸ್ಪರ್ಶ ನೀಡಿ ದೇಶ ವಿದೇಶಗಳಲ್ಲಿ ಜನಮನ್ನಣೆಗಳಿಸಿರುವ ಭಾಸ್ಕರ್ ಕಾಮತ್, ಲೇಖಕರಾಗಿ, ಕಲಾವಿದರಾಗಿ ಹತ್ತು ಹಲವು ಸಂಸ್ಥೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಹತ್ತಾರು ಪ್ರಶಸ್ತಿ, ಸನ್ಮಾನಗಳನ್ನು ಮುಡಿಗೇರಿಕೊಂಡಿದ್ದಾರೆ. ಅವರು ಐಸಿಸಿಆರ್ಗೆ ಮುಂದಿನ 3 ವರ್ಷಗಳವರೆಗೆ ಸದಸ್ಯರಾಗಿ 2ನೇ ಬಾರಿಗೆ ಆಯ್ಕೆಯಾಗಿದ್ದು, ನಾಡಿಗೆ ಹೆಮ್ಮೆಯನ್ನುಂಟು ಮಾಡಿದ್ದಾರೆ.