ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಕಾರ್ಕಳ ಬಸ್ ನಿಲ್ದಾಣದಲ್ಲಿ ಹತ್ತು ಅಂಗಡಿಗಳ ತೆರವು

Rashmi Kasaragodu
Updated On : 27 Oct 2013, 2:21 am

ಕಾರ್ಕಳ: ಇಲ್ಲಿನ ಬಸ್ ನಿಲ್ದಾಣದಲ್ಲಿ ಅಂಚೆ ಕಚೇರಿಗೆ ಸೇರಿದ ಜಾಗವನ್ನು ಶುಕ್ರವಾರ ಬೆಳಗ್ಗೆ ತೆರವುಗೊಳಿಸಲಾಯಿತು.
ಬಸ್ ನಿಲ್ದಾಣದಲ್ಲಿ ಸರ್ವೇ ನಂ. 135/5ರಲ್ಲಿ ಅಂಚೆ ಕಚೇರಿಗೆ ಸೇರಿದ 25 ಸೆಂಟ್ಸ್ ಜಾಗದಲ್ಲಿ ಪುರಸಭೆಯ 40 ಸೆಂಟ್ಸ್ ಹಾಗೂ ಖಾಸಗಿ 70 ಸೆಂಟ್ಸ್ ಜಾಗ ಸೇರಿಸಿ 1996ರಿಂದ ಬಸ್ ನಿಲ್ದಾಣವನ್ನಾಗಿ ಉಪಯೋಗಿಸಿಕೊಳ್ಳಲಾಗಿತ್ತು. ಅಂಚೆ ಕಚೇರಿಯ ಜಾಗದಲ್ಲಿ ವ್ಯಾಪಾರಸ್ಥರು ಅಂಗಡಿ ಕಟ್ಟಿಕೊಂಡಿದ್ದರು.
10 ಅಂಗಡಿ ತೆರವು: ಗುರುವಾರ ಪ್ರಧಾನ ಅಂಚೆ ಅಧಿಕಾರಿಗಳು, ಸರ್ವೇ ಕಾರ್ಯ ನಡೆಸಿ ಗುರುತು ಕಲ್ಲು ಹಾಕಲು ಅವಕಾಶ ನೀಡಬೇಕೆಂದು ಪುರಸಭೆಗೆ ಕೋರಿದ್ದರು. ಶುಕ್ರವಾರ ಬೆಳಗ್ಗೆ ಪೊಲೀಸ್ ಪಹರೆಯಲ್ಲಿ ತಹಸೀಲ್ದಾರ್ ಬಾಬು ದೇವಾಡಿಗ ಸಮಕ್ಷಮದಲ್ಲಿ ಸರ್ವೇ ಕಾರ್ಯ ನಡೆಯಿತು. ಅಲ್ಲಿದ್ದ ಮೂರ್ನಾಲ್ಕು ಅಂಗಡಿಗಳು, ಒಂದು ಮೊಬೈಲ್ ರಿಚಾರ್ಜ್ ಸೆಂಟರ್ ಹಾಗೂ ಫಾಸ್ಟ್ ಫುಡ್ ಅಂಗಡಿ ಸೇರಿದಂತೆ ಒಟ್ಟು 10 ಅಂಗಡಿ ಹಾಗೂ ಪುರಸಭೆಯ ನಾಲ್ಕು ಇತರ ಅಂಗಡಿಗಳನ್ನು ಜೆಸಿಬಿ ಬಳಸಿ ತೆರವುಗೊಳಸಲಾಯಿತು.
ಬಂಡಿಮಠಕ್ಕೆ ನಿಲ್ದಾಣ ಸ್ಥಳಾಂತರ?: ಅಂಚೆ ಇಲಾಖೆ ಈ ನಿವೇಶನದಲ್ಲಿ ತನ್ನ ಕಚೇರಿ ಕಟ್ಟಡ ಕಟ್ಟುವ ಯೋಜನೆ ಹಾಕಿಕೊಂಡಿರುವ ಕಾರಣ ಈಗಿರುವ ಬಸ್ ನಿಲ್ದಾಣ ಕ್ರಮೇಣ ಸ್ಥಳದ ಕೊರತೆಯಿಂದ ಬಂಡಿಮಠದ ನೂತನ ನಿಲ್ದಾಣಕ್ಕೆ ಸ್ಥಳಾಂತರಗೊಳ್ಳುವ ದಿನಗಳು ದೂರವಿಲ್ಲ.
ಕಾರ್ಯಾಚರಣೆ ವೇಳೆ ಅಂಚೆ ಇಲಾಖೆಯ ಪುತ್ತೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಪಿ.ಜಿ ನಾಯ್ಕ್, ಸಹಾಯಕ ಅಂಚೆ ಅಧೀಕ್ಷಕ ನವೀನ್ ಎಂ.ಎಲ್, ಪ್ರಧಾನ ಅಂಚೆ ಕಚೇರಿಯ ಅಧೀಕ್ಷಕ ಸುಧಾಕರ್ ಕೆ. ಹಾಗೂ ಸಿಬ್ಬಂದಿ, ಡಿವೈಎಸ್ಪಿ ಅಣ್ಣಾಮಲೈ, ವೃತ್ತನಿರೀಕ್ಷಕ ಜಿ.ಎಂ. ನಾಯಕ್, ಪ್ರಮೋದ ಕುಮಾರ್, ಎಸ್ಐ ರವಿ, ಗ್ರಾಮಾಂತರ ಠಾಣೆಯ ಮಹಾದೇವ ಶೆಟ್ಟಿ, ತಹಸೀಲ್ದಾರ್ ಬಾಬು ದೇವಡಿಗ, ಗ್ರೇಡ್-2 ತಹಸೀಲ್ದಾರ್ ಮಾಣಿಕ್ಯ, ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಸುಂದರ ಪೂಜಾರಿ  ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement