ಬಾಲನಾಟಕೋತ್ಸವದಲ್ಲಿ ಮೆಚ್ಚುಗೆ ಪಡೆದ ನಾಟಕ
ಗಂಗೊಳ್ಳಿ: ವಿಶ್ವ ಕೊಂಕಣಿ ಕೇಂದ್ರ ಮಂಗಳೂರು ಇವರು ಮಂಗಳೂರು ಪುರಭವನದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ವಿಶ್ವ ಕೊಂಕಣಿ ಬಾಲನಾಟಕೋತ್ಸವ -2013 (ರಂ ಪಂ ಪೋ)ದಲ್ಲಿ ಭಾಗವಹಿಸಿದ್ದ ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಜನ ಸಭಾ ಇದರ ಗಂಗೊಳ್ಳಿ ಕೊಂಕಣಿ ಖಾರ್ವಿ ಬಾಲನಾಟಕೋತ್ಸವ ತಂಡ ಪ್ರದರ್ಶಿಸಿದ ದರ್ಯಾಚಿ ಮಾಯಾ ಎಂಬ ಕೊಂಕಣಿ ನಾಟಕ ಜನ ಮೆಚ್ಚುಗೆಗೆ ಪಾತ್ರವಾಗಿದೆ. ವಿನೋದ ಗಂಗೊಳ್ಳಿ ನಿರ್ದೇಶನದ ಈ ನಾಟಕ ತಂಡದ ಗ್ರೂಪ್ ಮ್ಯಾನೇಜರ್ ಆಗಿ ಜಿ. ಪುರುಷೋತ್ತಮ ಆರ್ಕಾಟಿ, ಧ್ವನಿ ಮತ್ತು ಬೆಳಕು ಅವಿನಾಶ್ ಗಂಗೊಳ್ಳಿ, ಗೀತೆ ರಚನೆ ಜಿ. ಮೋಹನ ಖಾರ್ವಿ, ಹಾಡುಗಾರಿಕೆ ಜಿ. ಸೂರ್ಯಕಾಂತ ಖಾರ್ವಿ, ಸಹಾಯಕರಾಗಿ ಜಿ. ನಾಗಪ್ಪಯ್ಯ ಪಟೇಲ್ ಮತ್ತು ಜಿ. ರಾಮ ಖಾರ್ವಿ ಸಹಕರಿಸಿದ್ದರು. ಬಾಲ ನಟರಾಗಿ ಸಂಜಯ ಖಾರ್ವಿ, ಆದರ್ಶ ಖಾರ್ವಿ, ಗಣೇಶ ಖಾರ್ವಿ, ಪ್ರಮೋದ ಖಾರ್ವಿ, ಶರಣ್ ಖಾರ್ವಿ, ಪ್ರಜ್ವಲ್ ಖಾರ್ವಿ, ನಿತಿನ್ ಖಾರ್ವಿ, ವಿಂದ್ಯಾಶ್ರೀ ಖಾರ್ವಿ, ರಕ್ಷಿತಾ ಖಾರ್ವಿ, ಶ್ರೇಯಾ ಖಾರ್ವಿ, ಭೂಮಿಕಾ ಖಾರ್ವಿ, ಅಶ್ವಿನಿ ಖಾರ್ವಿ, ರಂಜಿತಾ ಖಾರ್ವಿ, ಅಕ್ಷತಾ ಖಾರ್ವಿ, ವಿನಯ ಖಾರ್ವಿ ಮತ್ತು ಅನ್ವಿತಾ ಖಾರ್ವಿ ನಾಟಕದಲ್ಲಿ ಅಭಿನಯಿಸಿದ್ದರು.