ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಇಂದು ಸೂಪರ್‌ಮಾರ್ಕೆಟ್ ಉದ್ಘಾಟನೆ

Lingaraj Badiger
Updated On : 30 Oct 2013, 12:37 pm

ಉಡುಪಿ: ನಗರದ ಬನ್ನಂಜೆ ರಸ್ತೆಯಲ್ಲಿರುವ ನಾರಾಯಣಗುರು ಸಂಕೀರ್ಣ ನೆಲಮಹಡಿಯಲ್ಲಿ ಉಡುಪಿ ಯೂನಿವರ್ಸಲ್ ಸ್ಮಾರ್ಟ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯು ಆರಂಭಿಸುತ್ತಿರುವ ಸೀಸನ್ ಫ್ರೆಶ್ ಸೂಪರ್ ಮಾರ್ಕೆಟ್ ಮಳಿಗೆಯು ಅ.30 ರಂದು ಬೆಳಗ್ಗೆ 10.30ಕ್ಕೆ ಉದ್ಘಾಟನೆಗೊಳ್ಳಲಿದೆ ಎಂದು ಸೂಪರ್ ಮಾರ್ಕೆಟ್‌ನ ಆಡಳಿತ ನಿರ್ದೇಶಕ ಜಮಾಲುದ್ದೀನ್ ತಿಳಿಸಿದರು.  ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ಮಳಿಗೆಯ ಉದ್ಘಾಟನೆಯನ್ನು ಸಂಸದ ಜಯಪ್ರಕಾಶ್ ಹೆಗ್ಡೆ ನೆರವೇರಿಸಲಿರುವರು. ಶಾಸಕ ಪ್ರಮೋದ್ ಮಧ್ವರಾಜ್ ಸೀಸನ್ ಫ್ರೆಶ್ ವೆಬ್‌ಸೈಟ್ ಅನಾವರಣಗೊಳಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ಪುರುಷೋತ್ತಮ ಶೆಟ್ಟಿ, ಸಲೀಂ, ಇಫ್ತಿಕಾರ್, ಜೆರ್ರಿ ವಿಲ್ಸನ್, ಬಿಲ್ಲವ ಸೇವಾ ಸಂಘದ ಅಧ್ಯಕ್ಷ ನಾರಾಯಣ ಕೋಟ್ಯಾನ್ ಭಾಗವಹಿಸಲಿರುವರು ಎಂದರು. ಮಳಿಗೆಯಲ್ಲಿ ದಿನನಿತ್ಯ ಬಳಕೆಯ ಸಾಮಗ್ರಿಗಳು ಹಾಗೂ ಉತ್ಕೃಷ್ಟ ಗುಣಮಟ್ಟ ಹಾಗೂ ಅತ್ಯುತ್ತಮ ಬೆಲೆಗಳಲ್ಲಿ ದೊರೆಯಲಿದೆ  ಎಂದರು.
ಗೋಷ್ಠಿಯಲ್ಲಿ ಸಲಹೆಗಾರ ಅನಿಷ್, ರಾಧಕೃಷ್ಣ ಹಾಗೂ ಮಂಗಳೂರಿನ ಟೈಟಾಸ್ ನೊರೋನ್ಹಾ ಇದ್ದರು.

ನ.6ರಂದು ವೇಳಾಪಟ್ಟಿ ನಿಗದಿ ಸಭೆ
ಮಡಿಕೇರಿ: 2013ರ ಮಾ.18ರ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಮಂಜೂರಾದ, ಮಜಲು ವಾಹನಗಳ ರಹದಾರಿಗಳಿಗೆ ಸಂಬಂಧಿಸಿದಂತೆ ವೇಳಾಪಟ್ಟಿ ನಿಗದಿ ಸಭೆ ನ.6ರಂದು ಬೆಳಗ್ಗೆ 11 ಗಂಟೆಗೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆಯಲಿದೆ. ಅರ್ಜಿದಾರರು ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿ ಹಾಗೂ ಸಭೆಯಲ್ಲಿ ಭಾಗವಹಿಸಲು ಆಸಕ್ತಿ ಇರುವ ಮಾರ್ಗದ ರಹದಾರಿದಾರಕರು ಸಭೆಯಲ್ಲಿ ಭಾಗವಹಿಸಬಹುದು.  ಸಭೆಯಲ್ಲಿ ಪರಿಗಣನೆಗೆ ಇರುವ ವಿಷಯಗಳ ಬಗ್ಗೆ ಕಚೇರಿ ವೇಳೆಯಲ್ಲಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಮಡಿಕೇರಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಪ್ರಾದೇಶಿಕ ಸಾರಿಗೆ ಅಧಿಕಾರಿ ಮತ್ತು ಕಾರ್ಯದರ್ಶಿ ನಫೀಜ್ ಅಹಮದ್ ತಿಳಿಸಿದ್ದಾರೆ.

ಗಾಂಧಿಪಾರ್ಕ್‌ಗೆ ನಾಮಫಲಕ ಕೊಡುಗೆ
ಕುಂದಾಪುರ: ಕುಂದಪ್ರಭ ಪಂಚಗಂಗಾವಳಿ ಉತ್ಸವ ಸಮಿತಿ ವತಿಯಿಂದ ಕುಂದಾಪುರದ ಗಾಂಧೀ ಮೈದಾನದ ಸಮೀಪವಿರುವ ಗಾಂಧಿ ಪಾರ್ಕಿಗೆ ಅಳವಡಿಸಲಾಗಿರುವ ನೂತನ ನಾಮಫಲಕವನ್ನು ಕುಂದಾಪುರ ಪುರಸಭೆ ಅಧ್ಯಕ್ಷೆ ಕಲಾವತಿ ಇತ್ತೀಚೆಗೆ ಅನಾವರಣಗೊಳಿಸಿದರು. ಉತ್ಸವ ಸಮಿತಿ ಸಂಚಾಲಕ ಯು. ಎಸ್. ಶೆಣೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಕುಂದಾಪುರ ಪುರಸಭೆ ಉಪಾಧ್ಯಕ್ಷ ನಾಗರಾಜ ಕಾಮಧೇನು, ಪುರಸಭಾ ಸದಸ್ಯರಾದ ರಾಜೇಶ ಕಾವೇರಿ, ಸತೀಶ ಶೆಟ್ಟಿ, ಪುಷ್ಪಾ ಶೇಟ್, ಶಕುಂತಲಾ, ಮಾಜಿ ಪುರಸಭಾಧ್ಯಕ್ಷ ಕೆ. ಮೋಹನದಾಸ ಶೈಣೈ, ರವಿಶಂಕರ, ನಾಮಫಲಕದ ಪ್ರಾಯೋಜಕರಾದ ಕೆ. ಆರ್. ನಾಯ್ಕ್, ಉತ್ಸವ ಸಮಿತಿ ಸದಸ್ಯರಾದ ಕೆ. ಕೆ. ರಾಮನ್, ಕೆ. ನಾರಾಯಣ, ರಮಾನಂದ ಕಾಮತ್, ಚಂದ್ರಶೇಖರ ಶೆಟ್ಟಿ, ವೈ.ಎಸ್. ಹರಿ ಇದ್ದರು. ಪಿ. ಜಯವಂತ ಪೈ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement