ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಕುಂದಾಪುರ: ಬಿಲ್ವವೃಕ್ಷ ಆಂದೋಲನ

Vishwanath S
Updated On : 3 Sept 2013, 11:38 am

ಕುಂದಾಪುರ: ಇಲ್ಲಿನ ಬಿಲ್ವವೃಕ್ಷ ಆಂದೋಲನದ ಅಂಗವಾಗಿ ಗೋಪಾಡಿಯ ಶ್ರೀಕಾಂತೇಶ್ವರ ದೇವಾಲಯ ಮತ್ತು ಹಂಗಳೂರು ಶನೈಶ್ವರ ದೇವಾಲಯಗಳ ಆವರಣದಲ್ಲಿ ಬಿಲ್ವವೃಕ್ಷಗಳನ್ನು ನೆಡುವ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಗೋಪಾಡಿ ಯುವಕ ಮಂಡಲ ಹಾಗೂ ಸಹನ ಯುವತಿ ಮಂಡಲಗಳ ಆಶ್ರಯದಲ್ಲಿ ಶ್ರೀಕಾಂತೇಶ್ವರ ದೇವಳದ ವಠಾರದಲ್ಲಿ ಯುವಕ ಸಂಘದ ಪ್ರಮುಖರಾದ ಗಣೇಶ ಭಟ್ ಹಾಗೂ ಸುಧಾ ಭಟ್ ದಂಪತಿ ಬಿಲ್ವ ಸಸಿಯನ್ನು ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆಂದೋಲನದ ಸಂಚಾಲಕ ಎನ್. ಮೋಹನ್ ಆಚಾರ್ಯ ಕೋಟೇಶ್ವರ ಬಿಲ್ವ ಸಸಿಗಳನ್ನು ವಿತರಿಸಿದರು. ಹಸಿರು ಭಾರತ ಆಂದೋಲನ ವಿಶ್ವಸ್ಥ ಸಂತೋಷ ಕೋಣಿ, ಸಹನ ಯುವತಿ ಮಂಡಲದ ಅಧ್ಯಕ್ಷೆ ಸುಜಾತ ಆಚಾರ್ಯ ಉಪಸ್ಥಿತರಿದ್ದರು. ಕುಂದಾಪುರ ರೋಟರಿಯ ಖಜಾಂಚಿ ವೆಂಕಟೇಶ್ ನಾವುಂದ ನಿರೂಪಿಸಿ, ವಂದಿಸಿದರು. ಹಂಗಳೂರಿನಲ್ಲಿ ಶ್ರೀ ಶನೈಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಅಣ್ಣಯ್ಯ ಪೂಜಾರಿ ದೇವಳದ ಆವರಣದಲ್ಲಿ ಬಿಲ್ವ ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಸಿರು ಭಾರತ ಆಂದೋಲನದ ವಿಶ್ವಸ್ಥ ಡಾ. ಉತ್ತಮ್ ಕುಮಾರ್ ಶೆಟ್ಟಿ, ಬಿಲ್ವವೃಕ್ಷ ಆಂದೋಲನದ ಸಂಚಾಲಕ ಎನ್. ಮೋಹನ ಆಚಾರ್ಯ, ಜೀವ ವಿಮಾ ನಿಗಮದ ಉದ್ಯೋಗಿ ರಾಮಚಂದ್ರ ಭಟ್, ನಾಟಕ ನಿರ್ದೇಶಕ ಮನೋಹರ ಪೈ, ಸಂತೋಷ ಕೋಣಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement