ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಪ್ರೀಮಿಯಂ ಸಂಗ್ರಹ: ಎಲ್‌ಐಸಿ ಉಡುಪಿ ವಲಯ ರಾಷ್ಟ್ರದಲ್ಲಿ ಪ್ರಥಮ

Vishwanath S
Updated On : 3 Sept 2013, 11:40 am

ಉಡುಪಿ: ಭಾರತೀಯ ಜೀವ ವಿಮಾ ನಿಗಮದ 113 ವಿಭಾಗಗಳ ಪೈಕಿ ಉಡುಪಿ ವಿಭಾಗವು ಏಕಕಂತಿನ ಪಾಲಿಸಿಗಳ ಪ್ರೀಮಿಯಂ ಸಂಗ್ರಹದಲ್ಲಿ ವಲಯ (ಕರ್ನಾಟಕ ಮತ್ತು ತಮಿಳುನಾಡು) ಮತ್ತು ರಾಷ್ಟ್ರಮಟ್ಟದಲ್ಲಿ 1ನೇ ಸ್ಥಾನ ಪಡೆದಿದೆ.
 ಸೋಮವಾರ ನಿಗಮದ ಉಡುಪಿ ವಿಭಾಗೀಯ ಕಚೇರಿಯಲ್ಲಿ ವಿಮಾ ಸಪ್ತಾಹದ ಉದ್ಘಾಟನಾ ಸಮಾರಂಭದ ಬಳಿಕ ಹಿರಿಯ ವಿಭಾಗಾಧಿಕಾರಿ ವೈ. ವಿಶ್ವನಾಥ ಗೌಡ್ ಸುದ್ದಿಗಾರರೊಂದಿಗೆ ಈ ಸಾಧನೆಯ ಸಂತಸ ಹಂಚಿಕೊಂಡರು.
 ಉಡುಪಿ ವಿಭಾಗವು ಏಕಕಂತಿನ ಪಾಲಿಸಿಗಳ ಪ್ರೀಮಿಯಂ ಸಂಗ್ರಹದ ಪ್ರಗತಿ ದರದಲ್ಲಿ ವಲಯ ಮಟ್ಟದಲ್ಲಿ 2ನೇ, ರಾಷ್ಟ ಮಟ್ಟದಲ್ಲಿ 4ನೇ, ಇತರ ಪಾಲಿಸಿಗಳ ಪ್ರೀಮಿಯಂ ಸಂಗ್ರಹದ ಪ್ರಗತಿ ದರದಲ್ಲಿ ವಲಯ ಮಟ್ಟದಲ್ಲಿ 2ನೇ, ರಾಷ್ಟ್ರಮಟ್ಟದಲ್ಲಿ 4ನೇ, ಒಟ್ಟು ಎಲ್ಲ ಪಾಲಿಸಿಗಳ ಪ್ರೀಮಿಯಂ ಸಂಗ್ರಹದಲ್ಲಿ ವಲಯ ಮಟ್ಟದಲ್ಲಿ 1ನೇ ಮತ್ತು ರಾಷ್ಟ್ರಮಟ್ಟದಲ್ಲಿ 2ನೇ ಸ್ಥಾನ ಪಡೆದಿದೆ ಎಂದು ಅವರು ಹೇಳಿದರು.
 2012-13ರಲ್ಲಿ ಉಡುಪಿ ವಿಭಾಗ ನಿಗದಿಪಡಿಸಿದ್ದ 4,45,000 ಪಾಲಿಸಿಗಳ ಪೈಕಿ 3,72,914 ಪಾಲಿಸಿಗಳನ್ನು ಮಾರಾಟ ಮಾಡುವ ಮೂಲಕ ಶೇ. 83.80 ಸಾಧನೆ ಮಾಡಿತ್ತು. ಅಲ್ಲದೇ ರು. 372.91 ಕೋಟಿಗಳ ಪ್ರಥಮ ಪ್ರೀಮಿಯಂ ಗುರಿಯಲ್ಲಿ ರು. 262.84 ಕೋಟಿ ಸಂಗ್ರಹಿಸಿ ಶೇ. 84.80 ಸಾಧನೆ ಮಾಡಿತ್ತು.
10 ಸಾವಿರ ಪ್ರತಿನಿಧಿಗಳು: ಗ್ರಾಮಾಂತರ ಪ್ರದೇಶ ಉಡುಪಿ ವಿಭಾಗವು ಉಡುಪಿ, ಮಂಗಳೂರು ಹಾಗೂ ಚಿಕ್ಕಮಗಳೂರು ಕಂದಾಯ ಜಿಲ್ಲೆಗಳನ್ನೊಳಗೊಂಡು 17 ಶಾಖೆ, 7 ಉಪಗ್ರಹ ಶಾಖೆ, 4 ಮಿನಿ ಕಚೇರಿಗಳನ್ನು ಒಳಗೊಂಡಿದೆ. 1000 ಉದ್ಯೋಗಿಗಳು ಹಾಗೂ 10,000 ತರಬೇತಿ ಪಡೆದ ಪ್ರತಿನಿಧಿಗಳನ್ನು ಹೊಂದಿದ್ದು ಅಖಿಲ ಭಾರತ ಮಟ್ಟದಲ್ಲಿ ಪ್ರತಿಷ್ಠಿತ ಸ್ಥಾನ ಹೊಂದಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ನಿಗಮದ ಉಡುಪಿ ವಿಭಾಗದ ಮಾರುಕಟ್ಟೆ ಪ್ರಬಂಧಕ ಯು. ನಾರಾಯಣ ಗೌಡ ಮತ್ತು ಕೆ.ಪಿ. ಪಂಡಿತ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement