'ಸುಮಧುರ ಜೋಡಿ' ಸಂಪನ್ನ
ಉಡುಪಿ: ಕೆಲಸದ ಒತ್ತಡ ಹಾಗು ಸ್ಪರ್ಧೆಯ ನಡುವೆ ಕೌಟುಂಬಿಕ ಜೀವನದಲ್ಲಿ ಮೌಲ್ಯಗಳು ಕಡಿಮೆಯಾಗುತ್ತಿದೆ. ದಾಂಪತ್ಯದಲ್ಲಿ ಸಾಮರಸ್ಯದ ಕೊರತೆ ಕಾಣುತ್ತಿದೆ ಎಂದು ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ವಿಷಾದಿಸಿದ್ದಾರೆ.
ಮಲ್ಪೆ ಕೊಡವೂರು ರೋಟರಿ ವತಿಯಿಂದ ಮಲ್ಪೆಯ ಏಳೂರು ಮೊಗವೀರ ಭವನದಲ್ಲಿ ಭಾನುವಾರ ಆಯೋಜಿಸಿದ್ದ 'ಸುಮಧುರ ಜೋಡಿ' ಕಾರ್ಯಕ್ರಮವನ್ನು ಪ್ರಮೋದ್ ಮಧ್ವರಾಜ್ ಹಾಗೂ ಅವರ ಪತ್ನಿ ಸುಪ್ರೀಯ ಪರಸ್ಪರ ಹಾರ ಬದಲಾಯಿಸಿ, ಸಿಹಿ ತಿನ್ನಿಸುವ ಮೂಲಕ ಉದ್ಘಾಟಿಸಿದರು.
ರೋಟರಿ ವಲಯ 2ರ ಸಹಾಯಕ ಗವರ್ನರ್ ಮಹೇಶ್ ಕುಮಾರ್, ಸುಮಾ ಮಹೇಶ್, ವಲಯ ಸೇನಾನಿ ಪ್ರಕಾಶ್ ಶೆಟ್ಟಿ, ಭಾಗ್ಯಜ್ಯೋತಿ ಪ್ರಕಾಶ್ ಶೆಟ್ಟಿ ಇದ್ದರು.
ರೋಟರಿ ಅಧ್ಯಕ್ಷೆ ಪೂರ್ಣಿಮಾ ಜನಾರ್ದನ್ ನಿರೂಪಿಸಿದರು.
ಕಾರ್ಯದರ್ಶಿ ಜನಾರ್ದನ್ ಕೊಡವೂರು ವಂದಿಸಿದರು. ಪ್ರಿಯಾ ಆರ್. ಭಟ್ ಪ್ರಾರ್ಥಿಸಿದರು.