ಮುದ್ದುಕೃಷ್ಣ ವೇಷ ಸ್ಪರ್ಧೆ
ಉಡುಪಿ: ಶಿರ್ವ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 10 ವರ್ಷದೊಳಗಿನ ಪುಟಾಣಿಗಳ ಮುದ್ದುಕೃಷ್ಣ ವೇಷ ಸ್ಪರ್ಧೆ ಇತ್ತೀಚೆಗೆ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಶಿರ್ವ ಮಹಿಳಾ ಮಂಡಲ ಹಾಗೂ ಆಳ್ವಾಸ್ ನುಡಿಸಿರಿ ಶಿರ್ವ ಘಟಕ ಅಧ್ಯಕ್ಷೆ ಬಬಿತಾ ಜಗದೀಶ್ ಅರಸ್ ಅವರು ವಿಜೇತ ಪುಟಾಣಿಗಳಿಗೆ ಬಹುಮಾನ ನೀಡಿದರು. ಕುತ್ಯಾರು ಶಾಲಾ ನಿವೃತ್ತ ಮುಖ್ಯ ಶಿಕ್ಷಕ ಕೆ. ಶ್ರೀನಿವಾಸ ರಾವ್, ದಯಾನಂದ ಅಚಾರ್ಯ ನಿರ್ಣಾಯಕರಾಗಿದ್ದರು. ಶಾಲೆಯ ಮುಖ್ಯ ಶಿಕ್ಷಕಿ ಲಿಲ್ಲಿ ನಜ್ರೆತ್ ಸ್ವಾಗತಿಸಿದರು. ಶಿಕ್ಷಕ ಪ್ರಭಾಕರ್ ಎನ್. ನಿರೂಪಿಸಿದರು. ಸೀತಾರಾಮ ಪ್ರಭು ಸಹಕರಿಸಿದರು.
ಬಸ್ ನಿಲುಗಡೆ ಪ್ರದೇಶ ಸ್ಥಳಾಂತರಕ್ಕೆ ಆಗ್ರಹ
ಕುಂದಾಪುರ: ವಡೇರಹೋಬಳಿ ವ್ಯಾಪ್ತಿಯ ಹುಣ್ಸೆಕಟ್ಟಿಯ ಸೇತುವೆಯನ್ನು ಸ್ಥಳೀಯವಾಗಿ ಸಂಚರಿಸುವ ಎಲ್ಲ ಬಸ್ಸುಗಳು ನಿಲ್ದಾಣವನ್ನಾಗಿ ಮಾಡಿಕೊಂಡಿದ್ದು, ಇದರಿಂದಾಗಿ ಆ ದಾರಿಯಲ್ಲಿ ಸಂಚರಿಸುವ ಇತರ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ. ಇತ್ತೀಚೆಗೆ ಈ ಪ್ರದೇಶದಲ್ಲಿ ಅನೇಕ ಅಪಘಾತಗಳೂ ಸಂಭವಿಸಿದ್ದು, ಬಸ್ ನಿಲುಗಡೆ ಪ್ರದೇಶವನ್ನು ಬದಲಾಯಿಸುವಂತೆ ಕುಂದಾಪುರದ ಸಂಚಾರಿ ಪೊಲೀಸರಿಗೆ ಡಿವೈಎಫ್‌ಐ ವತಿಯಿಂದ ಮನವಿ ಸಲ್ಲಿಸಲಾಯಿತು. ಡಿವೈಎಫ್‌ಐನ ಶೇಖರ ದೋಣಿಮನೆ, ಸಂತೋಷ ಕಲ್ಲಾಗರ, ಮಂಜುನಾಥ ಶೋಗನ್ ಹಾಗೂ ತಾಲೂಕು ಸಂಚಲನ ಸಮಿತಿಯ ಪ್ರಭಾಕರ ನೇರಳಕಟ್ಟೆ, ಸುರೇಶ ಕಲ್ಲಾಗರ, ರಾಜೇಶ್ ವಡೇರಹೋಬಳಿ, ರಾಜ ಬಿ.ಟಿ.ಆರ್. ಇದ್ದರು.
ಮಂದಾರ್ತಿ: ತೆಂಗು ದಿನಾಚರಣೆ
ಕುಂದಾಪುರ: ಬೆಂಗಳೂರು ಕೃಷಿ ವಿವಿ, ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್ ಮತ್ತು ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರಗಳ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಇಲ್ಲಿನ ಮಂದಾರ್ತಿ ಗ್ರಾಮದ ಪ್ರಗತಿಪರ ರೈತರು ಶಂಭು ಶಂಕರ ರಾವ್ ಅವರ ಮನೆಯ ಆವರಣದಲ್ಲಿ ತೆಂಗು ದಿನಾಚರಣೆ ಆಯೋಜಿಸಲಾಗಿತ್ತು. ಮಂಗಳೂರು ವಿಜಯ ಗ್ರಾಮಾಭಿವೃದ್ಧಿ ಪ್ರತಿಷ್ಠಾನದ ಸಹಾಯಕ ಪ್ರಬಂಧಕ ಸದಾಶಿವ ಕಾರ್ಯಕ್ರಮ ಉದ್ಘಾಟಿಸಿದರು. ಮಂದರ್ತಿ ಸಮಗ್ರ ಕೃಷಿ ಪದ್ಧತಿ ಯೋಜನೆಯ ಹೆಗ್ಗುಂಜೆ ಮತ್ತು ಶಿರೂರು ಗ್ರಾಮಗಳ ಬತ್ತ ಬೆಳೆಗಾರರ ಸಂಘದ ಅಧ್ಯಕ್ಷ ನರಸಿಂಹ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಮಂದರ್ತಿ ವ್ಯವಸಾಯ ಸೇವಾ ಸಹಕಾರ ಸಂಘದ ನಿವೃತ್ತ ಪ್ರಧಾನ ವ್ಯವಸ್ಥಾಪಕ ಶಂಭು ಶಟ್ಟಿ ಇದ್ದರು. ವಿಜ್ಞಾನ ಕೇಂದ್ರದ ತೋಟಗಾರಿಕಾ ವಿಷಯ ತಜ್ಞ ಚೈತನ್ಯ ಎಚ್.ಎಸ್. ಜಯಪ್ರಕಾಶ್, ಆರ್. ಶಂಭು ಶಂಕರ ರಾವ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಕೇಂದ್ರದ ಯೋಜನಾ ಸಹಾಯಕ ಕುಚೇಲಯ್ಯ ವಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ತರಬೇತಿ ಸಹಾಯಕ ಸಂಜೀವ್ ಕ್ಯಾತಪ್ಪ ವಂದಿಸಿದರು.
ರಿಕ್ಷಾ ನಿಲ್ದಾಣಕ್ಕೆ ಇಂಟರ್‌ಲಾಕ್
ಮಣಿಪಾಲ: ಇಲ್ಲಿನ ದಶರಥ ನಗರದ ರಿಕ್ಷಾ ನಿಲ್ದಾಣಕ್ಕೆ ಉದ್ಯಮಿ ಅರವಿಂದ ಪೂಜಾರಿ ಸುಮಾರು ರು. 25 ಸಾವಿರ ವೆಚ್ಚದಲ್ಲಿ ನಿರ್ಮಿಸಿಕೊಟ್ಟ ಇಂಟರ್‌ಲಾಕ್ ವ್ಯವಸ್ಥೆಯನ್ನು ಅವರೇ ಇತ್ತೀಚೆಗೆ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ಸರಿತಾ ಸಂತೋಷ್, ಮನೋಹರ್ ಶೆಟ್ಟಿ, ರತ್ನಾಕರ ಕುಂದರ್, ಪ್ರಕಾಶ್ ನಾಯಕ್, ದಂತ ವೈದ್ಯೆ ಡಾ. ಗಾಯತ್ರಿ, ಡಾ. ಪದ್ಮರಾಜ್ ಹೆಗ್ಡೆ ಇದ್ದರು. ಸಂಘದ ಅಧ್ಯಕ್ಷ ವಿಜಯ ಪುತ್ರನ್ ಹಿರೇಬೆಟ್ಟು, ಉಪಾಧ್ಯಕ್ಷ ಭರತ ತಿಂಗಳಾಯ ಬೆಳ್ಳಂಪಳ್ಳಿ, ಪ್ರಧಾನ ಕಾರ್ಯದರ್ಶಿ ಗಣೇಶ್ ಪ್ರಭು ಅಲೆವೂರು, ಕೋಶಾಧಿಕಾರಿ ಸುರೇಶ್ ನಾಯ್ಕ ಅಲೆವೂರು, ಸಂಘಟನಾ ಕಾರ್ಯದರ್ಶಿ ಪುರುಷೋತ್ತಮ ಸುವರ್ಣ, ಜೊತೆ ಕಾರ್ಯದರ್ಶಿ ಸುರೇಶ್ ಪಾಲನ್, ಕ್ರೀಡಾ ಕಾರ್ಯದರ್ಶಿ ದಿನೇಶ್ ನಾಯಕ್ ಇದ್ದರು. ವೆಂಕಟೇಶ ಶೆಟ್ಟಿಗಾರ್ ನಿರೂಪಿಸಿದರು.