ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಶಿರ್ವ: ಸಾರ್ವಜನಿಕ ಗಣೇಶೋತ್ಸವ

Rashmi Kasaragodu
Updated On : 12 Sept 2013, 12:33 pm

ಉಡುಪಿ: ನಮ್ಮ ಸಮಾಜ ವಿವಿಧ ಜಾತಿ, ಉಪಜಾತಿ, ಮತ, ಪಂಥಗಳಾಗಿ ಒಡೆದು ಮೂಲ ಸಂಸ್ಕೃತಿಯನ್ನೇ ವಿರೂಪಗೊಳಿಸುತ್ತಿದೆ. ಸ್ವಾರ್ಥ, ಮದ, ಮತ್ಸರ ಕೆಟ್ಟ ರಾಜಕೀಯಗಳಿಂದ ಒಡೆದು ಅಲ್ಪಸಂಖ್ಯಾತವಾಗುತ್ತಿದೆ ಎಂದು ಕುತ್ಯಾರು ಶ್ರೀ ಪರಶುರಾಮೇಶ್ವರ ಕ್ಷೇತ್ರದ ಧರ್ಮದರ್ಶಿ ವಿದ್ವಾನ್ ಶಂಭುದಾಸ ಗುರೂಜಿ ವಿಷಾದಿಸಿದರು.
ಶಿರ್ವ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ನಡೆದ 33ನೇ ವರ್ಷದ ಶ್ರೀ ಗಣೇಶೋತ್ಸವ ಧಾರ್ಮಿಕ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಿಸ್ವಾರ್ಥಿಗಳಾಗಬೇಕಾದರೆ ನಮ್ಮಲ್ಲಿರುವ, ಅವಿದ್ಯೆ, ಅಜ್ಞಾನ, ದುಷ್ಟ ಶಕ್ತಿಗಳನ್ನು ದೂರ ಮಾಡಬೇಕು. ಬುದ್ಧಿಶಕ್ತಿ, ವಿವೇಚನೆಯಿಂದ ನಡೆದಾಗ ಮಾತ್ರ ಮನುಷ್ಯ ಜನ್ಮ ಸಾರ್ಥಕವಾಗುತ್ತದೆ ಎಂದರು.
ಕಿನ್ನಿಗೋಳಿ ಪಾಂಪೈ ಕಾಲೇಜಿನ ನಿವೃತ್ತ ಉಪನ್ಯಾಸಕ ಶ್ರೀಧರ ಡಿ.ಎಸ್., ಶಿರ್ವ ಪೊಲೀಸ್ ನೂತನ ಠಾಣಾಧಿಕಾರಿ ಜಿ. ಅಶೋಕ್, ವೇದಮೂರ್ತಿ ಕೇಂಜ ಶ್ರೀಧರ ತಂತ್ರಿ ಇದ್ದರು.ಗಣೇಶೋತ್ಸವ ಸಮಿತಿ ಅಧ್ಯಕ್ಷ ಕೆ. ಸುಂದರ ಪ್ರಭು ಸ್ವಾಗತಿಸಿದರು. ಉಪನ್ಯಾಸಕ ಎಚ್.ಎಸ್. ಗೋಪಾಲ್ ಕಾರ್ಯಕ್ರಮ ನಿರೂಪಿಸಿದರು.



16ರಂದು ವಾರ್ಷಿಕ ಲೆಕ್ಕಪತ್ರ ಜಮಾಬಂದಿ
ಕಾರ್ಕಳ: ತಾಲೂಕು ಸಾಣೂರು ಗ್ರಾಮ ಪಂಚಾಯ್ತಿಯ 2012-13ನೇ ಸಾಲಿನ ವಾರ್ಷಿಕ ಲೆಕ್ಕಪತ್ರಗಳ ಜಮಾಬಂದಿ ಸೆ.16ರಂದು ಸೋಮವಾರ, ಸಾಣೂರು ಗ್ರಾಮ ಪಂಚಾಯ್ತಿ ಕಚೇರಿ ಸಭಾಂಗಣದಲ್ಲಿ ಜರುಗಲಿರುವುದು ಎಂದು ಪ್ರಕಟಣೆ ತಿಳಿಸಿದೆ.
ಕೊಡವೂರು ರೋಟರಿಯಿಂದ ಶಿಕ್ಷಕರ ದಿನಾಚರಣೆ
ಕೊಡವೂರು: ಶಿಕ್ಷಕ, ಶಿಷ್ಯರ ಬಾಂಧವ್ಯ ಅದ್ವಿತೀಯವಾಗಿದ್ದು ವರುಷಗಳೇ ಕಳೆದರೂ ಅದರ ನೆನಪು ಮಾಸದು. ತನ್ನ ಶಿಷ್ಯ ಸಮಾಜದಲ್ಲಿ ಉನ್ನತ ಹುದ್ದೆಗೇರಿದರೆ ಮೊದಲು ಸಂತಸ ಪಡುವುದು ಗುರುಗಳು ಎಂದು ಕೊಡವೂರು ಮಂಡೆ ಚಾವಡಿಯ ನಿವಾಸಿ ನಿವೃತ್ತ ಶಿಕ್ಷಕಿ ಸುನಂದ ಬಾಯಿ ನುಡಿದರು.
ಅವರು ಕೊಡವೂರು ರೋಟರಿ ಮಲ್ಪೆ ವತಿಯಿಂದ ನಡೆದ ಶಿಕ್ಷಕರ ದಿನಾಚರಣೆ ಅಂಗವಾಗಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ರೋಟರಿ ವಲಯ 2ರ ಸಹಾಯಕ ಗವರ್ನರ್ ಮಹೇಶ್ ಕುಮಾರ್, ರೋಟರಿ ಮಾಜಿ ಅಧ್ಯಕ್ಷರಾದ ಕೆ.ಟಿ. ಪ್ರಸಾದ್, ನರೇಂದ್ರ ರಾವ್, ಗಣಪತಿ ಪೈ ಉಪಸ್ಥಿತರಿದ್ದರು. ರೋಟರಿ ಅಧ್ಯಕ್ಷೆ ಪೂರ್ಣಿಮಾ ಜನಾರ್ದನ್ ಗತಿಸಿದರು. ಕಾರ್ಯದರ್ಶಿ ಜನಾರ್ದನ್ ಕೊಡವೂರು ವಂದಿಸಿದರು.
ಉಪನ್ಯಾಸ ಕಾರ್ಯಕ್ರಮ
ಕಾಪು: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ.ವಿ.ಎಸ್. ಆಚಾರ್ಯ ಸಭಾಭವನದಲ್ಲಿ ಮಂಗಳೂರು ವಿವಿ ಅಂಬಿಗರ ಚೌಡಯ್ಯ ಅಧ್ಯಯನ ಪೀಠ, ಮಂಗಳಗಂಗೋತ್ರಿ ಹಾಗೂ ಸ.ಪ್ರ.ದ. ಕಾಲೇಜಿನ ಸಹಯೋಗದಲ್ಲಿ ಆಧುನಿಕತೆ ಮತ್ತು ಸಾಂಪ್ರದಾಯಿಕ ಮೀನುಗಾರಿಕೆ ಸಮುದಾಯದ ಸಮಸ್ಯೆ ಮತ್ತು ಕಾಳಜಿಗಳು ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಉಪಸ್ಥಿತರಿದ್ದ ಐಕಳ ಪಾಂಪೈ ಕಾಲೇಜಿನ ವಾಣಿಜ್ಯ ವಿಭಾಗದ ಸಹ ಪ್ರಾಧ್ಯಾಪಕ ಡಾ.ಎಸ್. ಗುಣಾಕರ್ ಅವರು ಮೀನುಗಾರಿಕೆ ಸಮಸ್ಯೆಗಳ ಕುರಿತು ಮಾಹಿತಿ ನೀಡಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಎನ್. ಹೆಗಡೆ ಅಧ್ಯಕ್ಷತೆ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement