ಸ್ಕೌಟ್ಸ್ ಗೈಡ್ಸ್ ತರಬೇತಿ ಶಿಬಿರ
ಅಲೆವೂರು: ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳು ಯುವ ಜನಾಂಗದಲ್ಲಿ ನೈತಿಕ ಮೌಲ್ಯ ಬೆಳೆಸುವಲ್ಲಿ ಯಶಸ್ವಿಯಾಗಿವೆ ಎಂದು ಅಲೆವೂರು ಗ್ರೂಪ್ ಫೋರ್ ಎಜುಕೇಶನ್ ಕಾರ್ಯದರ್ಶಿ ಎ. ದಿನೇಶ್ ಕಿಣಿ ಹೇಳಿದರು.
ಅವರು ಭಾರತ್ ಸ್ಕೌಟ್ಸ್ ಹಾಗೂ ಗೈಡ್ಸ್ ಉಡುಪಿ ಸ್ಥಳೀಯ ಸಂಸ್ಥೆ ಹಾಗೂ ಅಲೆವೂರಿನ ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯ ಜಂಟಿ ಆಶ್ರಯದಲ್ಲಿ ನಡೆದ ಎರಡು ದಿನಗಳ ಸ್ಕೌಟ್ಸ್ ಮತ್ತು ಗೈಡ್ಸ್ ಪಟಲಾಂ ನಾಯಕರ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿ ಇಂತಹ ಶಿಬಿರಗಳು ಜೀವನಾನುಭವ, ಪರಿಸರ ಕಾಳಜಿ, ತಂಡ ಶಿಸ್ತು, ಜೀವನ ಕೌಶಲ್ಯ ಇತ್ಯಾದಿ ಕಲಿಸುವಲ್ಲಿ ನೆರವಾಗುತ್ತಿವೆ ಎಂದರು.
ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಕಮಿಶನರ್ ಎಡ್ವಿನ್ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆ ಪ್ರಾಂಶುಪಾಲೆ ರೂಪಾ ಡಿ. ಕಿಣಿ ಸ್ವಾಗತಿಸಿದರು. ಕೇಂದ್ರ ಸ್ಥಾನೀಯ ಕಮಿಶನರ್ ಆನಂದ ಅಡಿಗ ನಿರೂಪಿಸಿದರು. ರೋವರ್ ಲೀಡರ್ ನಿತಿನ್ ವಂದಿಸಿದರು.