ಒತ್ತಡದಿಂದ ಹೊರಬಂದರೆ ಬದುಕು ನೆಮ್ಮದಿ: ಡಾ.ಭಂಡಾರಿ
ಉಡುಪಿ: ಮಹಿಳೆಯರು ಅನೇಕ ಸಂದರ್ಭಗಳಲ್ಲಿ ಒತ್ತಡಕ್ಕೆ ಸಿಲುಕುವ ಅವಕಾಶವಿದ್ದು ಸೂಕ್ತ ಪರಿಹಾರ ಪಡೆದು ಅವುಗಳಿಂದ ದೂರವಾದಾಗ ನೆಮ್ಮದಿಯ ಬದುಕು ನಡೆಸಬಹುದು ಎಂದು ಡಾ. ಎ.ವಿ. ಬಾಳಿಗಾ ಆಸ್ಪತ್ರೆಯ ಮಾನಸಿಕ ವಿಭಾಗ ಮುಖ್ಯಸ್ಥ ಡಾ. ಪಿ.ವಿ. ಭಂಡಾರಿ ಹೇಳಿದ್ದಾರೆ.
ಇಲ್ಲಿನ ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಇತ್ತೀಚಿಗೆ ದಿಶಾ ಮಹಿಳಾ ಸಂಘದಿಂದ ಆಯೋಜಿಸಲಾದ 'ಮಹಿಳೆಯರ ಮಾನಸಿಕ ಸಮಸ್ಯೆಗಳು ಹಾಗೂ ಸಾಂಸಾರಿಕ ಜೀವನ' ವಿಚಾರ ಕುರಿತ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಪ್ರಾಚಾರ್ಯ ಡಾ. ಮಧುಸೂದನ್ ಭಟ್ ಅಧ್ಯಕ್ಷತೆ ವಹಿಸಿದ್ದರು. ದಿಶಾ ಮಹಿಳಾ ಸಂಘದ ಅಧ್ಯಾಪಕ ಸಲಹೆಗಾರ್ತಿ ಜಯಲಕ್ಷ್ಮಿ ಇದ್ದರು. ವಾಣಿಜ್ಯ ಉಪನ್ಯಾಸಕಿ ಜಯಲಕ್ಷ್ಮೀ ಸ್ವಾಗತಿಸಿದರು. ರಂಜಿತಾ ನಿರೂಪಿಸಿದರು. ಇಂದಿರಾ ವಂದಿಸಿದರು.