ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಕಾರು- ಬಸ್ ಡಿಕ್ಕಿ: ಓರ್ವ ದುರ್ಮರಣ

Lingaraj Badiger
Updated On : 17 Sept 2013, 12:12 pm

ಮಣಿಪಾಲ: ಇಲ್ಲಿಗೆ ಸಮೀಪದ ಪರ್ಕಳದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕಾರು ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮೃತರು ವಸಂತ ಕಾಮತ್ (62), ಅವರು ಪೆರ್ಡೂರಿನ ಕಾಮತ್ ರೆಸ್ಟೋರೆಂಟ್‌ನ ಮಾಲೀಕ. ಅವರು ತಮ್ಮ ಕಾರಿನಲ್ಲಿ ಉಡುಪಿಯಿಂದ ಪೆರ್ಡೂರು ಕಡೆಗೆ ಹೋಗುತ್ತಿದ್ದಾಗ, ಮಧ್ಯಾಹ್ನ 1.20 ಗಂಟೆಗೆ ಇಲ್ಲಿನ ಸಿಂಡಿಕೇಟ್ ಬ್ಯಾಂಕ್‌ನ ಮುಂಭಾಗದಲ್ಲಿ ಹೆಬ್ರಿ ಕಡೆಯಿಂದ ಉಡುಪಿ ಕಡೆಗೆ ಹೋಗುವ ಬಸ್ ಡಿಕ್ಕಿ ಹೊಡೆದು ಕಾರು ನಿಯಂತ್ರ ತಪ್ಪಿ ಅಡ್ಡಬಿದ್ದು ವಸಂತ ಕಾಮತ್ ತೀವ್ರ ಗಾಯಗೊಂಡರು. ತಕ್ಷಣ ಅವರನ್ನು ಮಣಿಪಾಲ ಆಸ್ಪತ್ರೆಗೆ ಸಾಗಿಸಿದರಾದರೂ ಅವರು ಅದಾಗಲೇ ಮೃತಪಟ್ಟಿದ್ದರು. ಈ ಬಗ್ಗೆ ಮೃತರ ಸಹೋದರ ಹರಿದಾಸ್ ಕಾಮತ್ ನೀಡಿದ ದೂರಿನಂತೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಡಲು ಪಾಲಾಗುತ್ತಿದ್ದ ಮೂವರ ರಕ್ಷಣೆ
ಮಂಗಳೂರು: ಪಣಂಬೂರು ಕಡಲ ತೀರದಲ್ಲಿ ಕೊಚ್ಚಿ ಹೋಗುತ್ತಿದ್ದ ಮೂವರು ಯುವಕರನ್ನು ಜೀವರಕ್ಷಕ ದಳದವರು ರಕ್ಷಿಸಿದ್ದಾರೆ. ಪುತ್ತೂರು ಕಬಕ ನಿವಾಸಿ ಮೊಹಮ್ಮದ್ ಇರ್ಷಾದ್ (21), ಪುತ್ತೂರು ವಿವೇಕಾನಂದ ಕಾಲೇಜ್ ವಿದ್ಯಾರ್ಥಿ ಮೊಹಮ್ಮದ್ ನೌಶಾದ್ (17), ಬಂಟ್ವಾಳ ಸೂರಿಕುಮೇರು ನೌಶಾದ್  (20) ಅವರನ್ನು ರಕ್ಷಿಸಲಾಗಿದೆ.  ಸೋಮವಾರ ಸಂಜೆ 6.15ಕ್ಕೆ ಕಡಲಿಗಿಳಿದು ಈಜುತ್ತಿದ್ದ ಅವರು ಅಲೆಗಳಲ್ಲಿ ಕೊಚ್ಚಿ ಹೋಗುತ್ತಿದ್ದ ವೇಳೆ ಜೀವರಕ್ಷಕ ದಳದವರು ಧಾವಿಸಿ ರಕ್ಷಣೆ ಮಾಡಿದ್ದಾರೆ ಎಂದು ತಂಡದ ಮುಖ್ಯಸ್ಥ ಯತೀಶ್ ಬೈಕಂಪಾಡಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement