ಮೋದಿ ಆಯ್ಕೆ: ಕಾರ್ಕಳ, ಕುಂದಾಪುರದಲ್ಲಿ ಸಂಭ್ರಮಾಚರಣೆ
ಕುಂದಾಪುರ: ಗುಜರಾತ್ ಮುಖ್ಯಮಂತ್ರಿ ಶ್ರೀನರೇಂದ್ರ ಮೋದಿ ಅವರನ್ನು ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಘೋಷಣೆ ಮಾಡಿದ ಅಂಗವಾಗಿ ತ್ರಾಸಿ ಬೈಪಾಸ್ ಬಳಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು. ಇದಕ್ಕೂ ಮೊದಲು ತ್ರಾಸಿ ಕಂಚುಗೊಡು ಹೊಸಪೇಟೆ ನಾಯಕವಾಡಿ ಗುಜ್ಜಾಡಿಯಲ್ಲಿ ಬೈಕ್ ರ್ಯಾಲಿ ನಡೆಸಲಾಯಿತು.
ಬೈಂದೂರು ಕ್ಷೇತ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸದಾನಂದ ಯು., ತ್ರಾಸಿ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ರಾಮದಾಸ ಖಾರ್ವಿ, ಬಿಜೆಪಿ ಮುಖಂಡರಾದ ಹರೀಶ ಮೇಸ್ತ, ದತ್ತಾತ್ರೇಯ ಖಾರ್ವಿ, ನಾರಾಯಣ ಗುಜ್ಜಾಡಿ, ಪ್ರದೀಪ ಪೂಜಾರಿ, ಉಮೇಶ ದೇವಾಡಿಗ, ಸುನೀಲ್ ಖಾರ್ವಿ, ವಿನೋದ್, ಚೇತನ್, ದಿವಾಕರ್ ಖಾರ್ವಿ ಮತ್ತಿತರರು ಇದ್ದರು.
ಕಾರ್ಕಳ: ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಆಯ್ಕೆ ಮಾಡಿರುವುದಕ್ಕೆ ಕಾರ್ಕಳ ನಗರ ಬಿಜೆಪಿ ವತಿಯಿಂದ ಬಸ್ನಿಲ್ದಾಣ, ಅನಂತಶಯನ, ಬಂಡಿಮಠ ಬಸ್ ನಿಲ್ದಾಣದಲ್ಲಿ ಪಟಾಕಿ ಸಿಡಿಸಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು. ನಗರಾಧ್ಯಕ್ಷ ಗಿರಿಧರ್ ನಾಯಕ್, ನಗರದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ರಾವ್, ಯುವಮೋರ್ಚಾ ಅಧ್ಯಕ್ಷ ಮಹಾವೀರ ಹೆಗ್ಡೆ, ಪುರಸಭಾ ಸದಸ್ಯರಾದ ಸುನಿಲ್ ಕೋಟ್ಯಾನ್, ಯೋಗಿಶ್ ದೇವಾಡಿಗ, ಲಲಿತಾ ಆರ್.ಭಟ್, ಅನಿತಾ ಅಂಚನ್, ಬಿಜೆಪಿ ಪ್ರಮುಖರಾದ ಯೋಗಿಶ್ ನಾಯಕ್, ಪ್ರಕಾಶ್ ಬಲಿಪ, ರಮೇಶ್ ಹೆಗ್ಡೆ, ಚೇತನ್ ನಾಯಕ್, ಸುಭಾಸ್ ಹೆಗ್ಡೆ, ಆರೀಫ್ ಕಲ್ಲೊಟ್ಟೆ, ಗಿರಿಧರ್ ಭಟ್, ರಾಘವೇಂದ್ರ ಕುಲಾಲ್, ಹರೀಶ್ ಅಂಚನ್ ಇದ್ದರು.