ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಉಡುಪಿ ಬಿಜೆಪಿ ಅಭ್ಯರ್ಥಿ

Mainashree
Updated On : 10 Apr 2014, 10:39 am

ಕಾಪು: ಉಡುಪಿ- ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿ ಅವರು 'ತಾನು ಗೆದ್ದರೆ ಮಹಿಳೆಯರ ಧ್ವನಿಯಾಗುತ್ತೇನೆ' ಎಂದು ಹೇಳಿರುವುದು ಹಾಸ್ಯಾಸ್ಪದವಾಗಿದೆ ಎಂದು ಕಾಂಗ್ರೆಸ್ ಮಹಿಳಾ ಕಾಪು ದಕ್ಷಿಣ ಬ್ಲಾಕ್ ಅಧ್ಯಕ್ಷೆ ಗೀತಾ ವಾಗ್ಳೆ ಮತ್ತು ಉತ್ತರ ಬ್ಲಾಕ್ ಅಧ್ಯಕ್ಷೆ ಸಂಧ್ಯಾ ಶೆಟ್ಟಿ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
 ಯಾವಾಗ ಮಹಿಳೆಯರ ಪರವಾಗಿ ಧ್ವನಿ ಎತ್ತಬೇಕಿತ್ತೋ ಆಗ ಎತ್ತಲಿಲ್ಲ, ಆಗ ಮೌನವಾಗಿದ್ದು ಮಹಿಳೆಯ ಮೇಲೆ ದೌರ್ಜನ್ಯ ಎಸಗಿದ ಪುರುಷರ ಪರವಾಗಿ ನಿಂತರು. ಇನ್ನು ಅವರು ಮಹಿಳೆಯರ ಧ್ವನಿಯಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
 ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಸಚಿವೆ ಕರಂದ್ಲಾಜೆ ಅವರ  ಸಹಸಚಿವರೊಬ್ಬರು ಮಿತ್ರನ ಹೆಂಡತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದಾಗ, ಪವಿತ್ರ ವಿಧಾನ ಸಭೆಯಲ್ಲಿ ಮೂವರ ಸಚಿವರು ಬ್ಲೂ ಫಿಲಂ ವೀಕ್ಷಿಸಿದಾಗ, 2009ರಿಂದ 2011ರವರೆಗೆ ಸಾವಿರಕ್ಕೂ ಅಧಿಕ ಮಹಿಳೆಯರು - ಹೆಣ್ಣುಮಕ್ಕಳು ನಮ್ಮ ರಾಜ್ಯದಿಂದ ಕಾಣೆಯಾದಾಗ, ಸಚಿವರೊಬ್ಬರ ನರ್ಸ್ ಒಬ್ಬರೊಂದಿಗೆ ರಾಸಲೀಲೆ ನಡೆಸಿದಾಗ, ಉಡುಪಿ ಶಾಸಕರು ನಂಗಾ ನಾಚ್ ಆಯೋಜಿಸಿದಾಗ, ಅವರ ಪತ್ನಿ ಶಂಕಾಸ್ಪದ ರೀತಿಯಲ್ಲಿ ಮೃತಪಟ್ಟಾಗ, ಸೌಜನ್ಯರಂತಹ ಅಮಾಯಕಿ ವಿದ್ಯಾರ್ಥಿಗಳ ಅತ್ಯಾಚಾರ, ಕೊಲೆಗಳು ನಡೆದಾಗ ಅವರ ಧ್ವನಿ ಎಲ್ಲಿ ಹೋಗಿತ್ತು ಎಂದು ಪ್ರಶ್ನಿಸಿದ್ದಾರೆ.
ಕಾರ್ಮಿಕ ಕಾಯ್ದೆ ತಿದ್ದುಪಡಿಗೆ ಚಿಂತನೆ: ವೀರಪ್ಪ ಮೊಯ್ಲಿ
ಕಾರ್ಕಳ: ಕೃಷಿ ಮತ್ತು ಕೈಗಾರಿಕೆಗಳು ಒಂದಕ್ಕೊಂದು ಪೂರಕವಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಗ್ರಾಮೀಣ ಪ್ರದೇಶದ ನಿರೀಕ್ಷಿತ ಆರ್ಥಿಕ ಅಭಿವೃದ್ಧಿ ಸಾಧ್ಯ ಎಂದು ಕೇಂದ್ರ ಸಚಿವ ಡಾ.ಎಂ. ವೀರಪ್ಪ ಮೊಯ್ಲಿ ಹೇಳಿದರು. ಅವರು ಇಲ್ಲಿನ ಕೆದಿಂಜೆ ಗೇರುಬೀಜ ಸಂಸ್ಕರಣಾ ಘಟಕದಲ್ಲಿ ಮಂಗಳವಾರ ಮತಯಾಚನೆ ನಡೆಸಿ ಮಾತನಾಡಿದರು. ಕಾಂಗ್ರೆಸ್ ಸರ್ಕಾರ ಈಗಾಗಲೇ ಸಂಘಟಿತ ಕಾರ್ಮಿಕರಿಗಿರುವ ಸೌಲಭ್ಯಗಳನ್ನು ಈ ಎರಡೂ ವರ್ಗಗಳ ಅಸಂಘಟಿತ ಕಾರ್ಮಿಕರಿಗೂ ವಿಸ್ತರಿಸುವ ನಿಟ್ಟಿನಲ್ಲಿ ಕಾರ್ಮಿಕ ಕಾಯ್ದೆಗೆ ವಿಶೇಷ ತಿದ್ದುಪಡಿಯನ್ನು ತರಲು ಕಾರ್ಯತತ್ಪರವಾಗಿದೆ ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಗೋಪಾಲ ಭಂಡಾರಿ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧಾಕರ ಕೋಟ್ಯಾನ್ ಇದ್ದರು.
'ಬಿಜೆಪಿ ಪ್ರಣಾಳಿಕೆ ದಲಿತ ವಿರೋಧಿ'
ಕಾರ್ಕಳ: ಬಿಜೆಪಿ ಪ್ರಣಾಳಿಕೆಯಲ್ಲಿ ದೀನ, ದಲಿತರ, ಶೋಷಿತ ಸಮಾಜದ ಬಗ್ಗೆ ಉಲ್ಲೇಖವಿಲ್ಲ. ಮನುವಾದದ ಸ್ಪಷ್ಟ ಸೂಚನೆ ಎದ್ದು ಕಾಣುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ ಸದಸ್ಯ ಡಾ. ಪ್ರೇಮದಾಸ್ ಟೀಕಿಸಿದ್ದಾರೆ. ಹಿಂದೆ ರಾಜರ ಆಸ್ಥಾನದಲ್ಲಿ ಮಂತ್ರಿಗಳಾಗಿ ದ್ದವರು ಶೋಷಿತ ವರ್ಗದವರನ್ನು ತಮ್ಮ ಹಿಡಿತದಲ್ಲಿರಿಸಿಕೊಂಡು ಸುಖವಾಗಿರುತ್ತಿದ್ದರು. ಅದರ ಪ್ರತಿರೂಪವೇ ಬಿಜೆಪಿ ಪ್ರಣಾಳಿಕೆಯಾಗಿದೆ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement