ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಶ್ರೀನಗರ ಶಂಕರಾಚಾರ್ಯ ಬೆಟ್ಟ ಮರುನಾಮಕರಣಕ್ಕೆ ಹಿಂದೂ ಯುವಸೇನೆ ವಿರೋಧ

Lingaraj Badiger
Updated On : 23 Apr 2014, 11:35 am

ಉಡುಪಿ: ಜಮ್ಮು- ಕಾಶ್ಮೀರದ ಶ್ರೀನಗರದಲ್ಲಿರುವ ಹಿಂದೂ ಶ್ರದ್ಧಾಕೇಂದ್ರ ಶಂಕರಾಚಾರ್ಯ ಬೆಟ್ಟವನ್ನು 'ತಖ್ತ್- ಎ - ಸುಲೇಮಾನ್‌' ಎಂದು ಮರುನಾಮಕರಣಗೊಳಿಸಲು ಭಾರತೀಯ ಪುರಾತತ್ವ ಇಲಾಖೆ ಮತ್ತು ಜಮ್ಮುಕಾಶ್ಮೀರ ರಾಜ್ಯ ಸರ್ಕಾರಗಳು ಹುನ್ನಾರ ನಡೆಸುತ್ತಿದೆ ಎಂದು ಹಿಂದೂ ಯುವಸೇನೆ ಆತಂಕ ವ್ಯಕ್ತಪಡಿಸಿದೆ.
ಇದರ ವಿರುದ್ಧ ಕೂಡಲೇ ಕಾರ್ಯಪ್ರವೃತ್ತರಾಗುವಂತೆ ಶಂಕರಾಚಾರ್ಯ ಪೀಠದ ಮಠಾಧಿಪತಿಗಳಿಗೆ ಪತ್ರ ಮೂಲಕ ವಿನಂತಿಸಲಾಗಿದೆ ಎಂದು ಹಿಂದೂ ಯುವ ಸೇನೆ ಜಿಲ್ಲಾಧ್ಯಕ್ಷ ವಾಸುದೇವ ಭಟ್ ಪೆರಂಪಳ್ಳಿ ತಿಳಿಸಿದ್ದಾರೆ. ಈ ದೇಶದಲ್ಲಿ ಈಗಾಗಲೇ ನೂರಾರು ಸ್ಥಳಗಳ ಹೆಸರುಗಳನ್ನು ತುಷ್ಟೀಕರಣದ ನೆಪದಲ್ಲಿ ಬದಲಾಯಿಸಲಾಗಿದೆ. ರಾಜ್ಯದ ಚಂದ್ರದ್ರೋಣ ಪರ್ವತವನ್ನು ಬಾಬಾ ಬುಡನ್‌ಗಿರಿ ಎಂದು ಬದಲಾಯಿಸಿ, ಅದರ ಪರಿಣಾಮವಾಗಿ ಹಿಂದು ಸಂಘಟನೆಗಳು ಹೋರಾಟ ನಡೆಸುತ್ತಿವೆ.
ಈಗಾಗಲೇ ಶ್ರೀನಗರದ ಹರಿಪರ್ವತವನ್ನು ಕೋಹಿ ಸುಲೇಮಾನ್ ಎಂದೂ, ಅನಂತನಾಗ್‌ನ್ನು ಇಸ್ಲಮಾಬಾದ್ ಎಂದೂ ಕರೆಯಲು ನಿರ್ಧರಿಸಲಾಗಿದೆ. ಇದೀಗ ಆ ಸಾಲಿಗೆ ಮತ್ತೊಂದು ಸೇರ್ಪಡೆಗೆ ಹುನ್ನಾರ ನಡೆಯುತ್ತಿದೆ. ಆದ್ದರಿಂದ ಶಂಕರಾಚಾರ್ಯ ಪೀಠದ ಎಲ್ಲ ಮಠಾಧಿಪತಿಗಳು ಈ ಬಗ್ಗೆ ಹೋರಾಟಕ್ಕೆ ಕೂಡಲೇ ಮುಂದಾಗಬೇಕು ಎಂದು ಶೃಂಗೇರಿ, ಸ್ವರ್ಣವಲ್ಲಿ, ರಾಮಚಂದ್ರಾಪುರ, ಕಂಚಿ, ಎಡನೀರು, ಬಾಳೆಕುದ್ರು ಮೊದಲಾದ ಮಠಾಧೀಶರಿಗೆ ಪತ್ರ ಬರೆದು ವಿನಂತಿಸಲಾಗಿದೆ ಎಂದು ವಾಸುದೇವ ಭಟ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement