5 ಅಡಿ ಎತ್ತರದ ತುಳಸಿ ಗಿಡ!
ಉಡುಪಿ: ತುಳಸಿ ಗಿಡ ಅಂದಾಜು ಎಷ್ಟು ಎತ್ತರ ಬೆಳೆಯಬಹುದು? 1 ಅಡಿಯಿಂದ 3 ಅಡಿ ಎತ್ತರ ಬೆಳೆಯುತ್ತದೆ. ಆದರೆ, ಉಡುಪಿ ತಾಲೂಕಿನ 80ನೇ ಬಡಗುಬೆಟ್ಟು ಗ್ರಾ.ಪಂ.ನ ಬೈರಂಜೆಯ ನಿವಾಸಿ ಮಧುಸೂದನ ಪ್ರಭು ಮನೆ ಅಂಗಳದಲ್ಲಿ ತುಳಸಿ ಗಿಡ 5 ಅಡಿ ಎತ್ತರ ಬೆಳೆದಿದ್ದು, 20 ಅಡಿ ಸುತ್ತಳತೆ ಅಗಲಕ್ಕೆ ಹರಡಿಕೊಂಡಿದೆ. ಯಥೇಚ್ಛವಾಗಿ ನಿತ್ಯ ತುಳಸಿ ದಳ ಕಿತ್ತರೂ ಮತ್ತಷ್ಟು ಬೆಳೆಯುವ ಹಸಿರು ಎಲೆಗಳಿಂದ ಕೂಡಿರುವ ಈ ಗಿಡದ ಕಾಂಡ ಹಿಡಿಯಷ್ಟು ದಪ್ಪವಿದೆ. ಅದರ ಗೆಲ್ಲುಗಳು ಭಾರದಿಂದ ಬಾಗುತ್ತಿದ್ದು ಅದಕ್ಕೆ ಆಧಾರವಾಗಿ ಇಟ್ಟಿಗೆ, ಮರದ ತುಂಡುಗಳನ್ನು ಇಡಲಾಗಿದೆ. ವರ್ಷದಿಂದ ನಿತ್ಯ ಬೆಳಗ್ಗೆ ನೀರು ಬಿಟ್ಟರೆ ಬೇರೇನೂ ಗೊಬ್ಬರ ಹಾಕದೆ ಬೆಳೆದಿರುವ ಈ ತುಳಸಿ ಗಿಡ ಸ್ಥಳೀಯರ ಆಕರ್ಷಣೆಗೆ ಕಾರಣವಾಗಿದೆ.