ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ರಾಜ್ಯದಲ್ಲಿ ಮಾತ್ರ ರಂಗಕಾಯಕ ನಿರಂತರ: ಮಂಡ್ಯ ರಮೇಶ್

Rashmi Kasaragodu
Updated On : 26 Apr 2014, 12:36 pm

ಉಡುಪಿ: ರಂಗಭೂಮಿ ಉಡುಪಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಸಹಯೋಗದಲ್ಲಿ ಶುಕ್ರವಾರ ಸಂಜೆ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಉಡುಪಿ ರಂಗಭೂಮಿಯ ರೂವಾರಿ ದಿ. ಕುತ್ಪಾಡಿ ಆನಂದ ಗಾಣಿಗರ ನೆನಪಿನಲ್ಲಿ 'ಆನಂದೋತ್ಸವ' ನಾಟಕಗಳ ಸಂಗಮ ಎಂಬ ಮೂರು ದಿನಗಳ ನಾಟಕ ಪ್ರದರ್ಶನವನ್ನು ರಂಗಕರ್ಮಿ ಮಂಡ್ಯ ರಮೇಶ್ ಉದ್ಘಾಟಿಸಿದರು.
ಭಾರತದಲ್ಲಿ ನಿರಂತರವಾಗಿ ರಂಗಕಾಯಕ ನಡೆಯುತ್ತಿರುವ ಏಕೈಕ ರಾಜ್ಯವೆಂದರೆ ಅದು ಕರ್ನಾಟಕ ಮಾತ್ರ. ಆಧುನಿಕ ರಂಗಭೂಮಿಯ ಪರಿಕಲ್ಪನೆ ಪ್ರಾರಂಭವಾಗಿದ್ದು ಉಡುಪಿಯಲ್ಲಿ ಎಂದ ಅವರು, ಉಡುಪಿ ರಂಗಭೂಮಿ 50 ವರ್ಷ ಪೂರೈಸಲು ದಿ. ಆನಂದ ಗಾಣಿಗರ ಪರಿಶ್ರಮವೇ ಕಾರಣವಾಗಿದೆ. ಇಂದಿನ ಎಳೆಯ ತಲೆಮಾರಿಗೆ ಅವರು ರಂಗಭೂಮಿಯನ್ನು ಸಿದ್ಧ ಮಾಡಿಕೊಟ್ಟಿದ್ದಾರೆ. ಮೈಸೂರಿನಲ್ಲಿ ಸರ್ಕಾರದ ವತಿಯಿಂದ ರಂಗಭೂಮಿಯೊಂದು ಶೀಘ್ರ ನಿರ್ಮಾಣವಾಗಲಿದ್ದು ಅದಕ್ಕೆ ದಿ. ಆನಂದ ಗಾಣಿಗರ ಹೆಸರನ್ನು ಇಡುವಂತಾಗಲಿ ಎಂದು ಹಾರೈಸಿದರು.
ರಂಗಭೂಮಿ ಉಡುಪಿಯ ಗೌರವಾಧ್ಯಕ್ಷ ಡಾ.ಎಚ್. ಶಾಂತಾರಾಮ್ ಪ್ರಾಸ್ತಾವಿಕವಾಗಿ  ಮಾತನಾಡಿದರು. ಪ್ರಾಯೋಜಕರಾದ ಉದ್ಯಮಿ ಸತೀಶ್ ವೆಂಕಟರಮಣ ಅವರ ಗೈರು ಹಾಜರಿಯಲ್ಲಿ ಅವರ ತಾಯಿ ವನಮಾಲಾ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ತರಂಗ ವಾರ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕಿ ಡಾ.ಯು.ಬಿ. ರಾಜಲಕ್ಷ್ಮೀ, ರಂಗಕರ್ಮಿ ಜೀವನ್ ರಾಮ್ ಸುಳ್ಯ, ರಂಗಭೂಮಿಯ ಉಪಾಧ್ಯಕ್ಷ ಯು. ದಾಮೋದರ ಮತ್ತು ಯು. ಉಪೇಂದ್ರ, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಹಾ.ಲಾ. ನಾಯಕ ಉಪಸ್ಥಿತರಿದ್ದರು.
ರಂಗಭೂಮಿಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಸ್ವಾಗತಿಸಿದರು.
 ಪ್ರಧಾನ ಕಾರ್ಯದರ್ಶಿ ಪಿ. ವಾಸುದೇವ ರಾವ್ ನಿರೂಪಿಸಿದರು.
ನಂತರ ಮೊದಲ ದಿನವಾದ ಶುಕ್ರವಾರ ನಟನ ಮೈಸೂರು ತಂಡದಿಂದ ಬಿ. ಜಯಶ್ರೀ ನಿರ್ದೇಶನದ 'ಅಗ್ನಿ ಪಥ' ಹಾಗೂ ಮಂಡ್ಯ ರಮೇಶ್ ನಿರ್ದೇಶನದ 'ಊರು ಭಂಗ' ನಾಟಕಗಳು ಪ್ರದರ್ಶನಗೊಂಡವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement