6ರಿಂದ 'ಮಾಸ್ಟರ್ಸ್ ನ್ಯಾಶನಲ್ ಅತ್ಲೆಟಿಕ್ ಚಾಂಪಿಯನ್‌ಶಿಪ್'
ಮಂಗಳೂರು: ಇಂಡಿಯಾ ಮಾಸ್ಟರ್ಸ್ ಅತ್ಲೆಟಿಕ್ಸ್ ವತಿಯಿಂದ ಫೆ. 6 ರಿಂದ 9ರವರೆಗೆ ನಗರದ ಮಂಗಳಾ ಕ್ರೀಡಾಂಗಣದಲ್ಲಿ '34ನೇ ಮಾಸ್ಟರ್ಸ್ ನ್ಯಾಶನಲ್ ಅತ್ಲೆಟಿಕ್ ಚಾಂಪಿಯನ್‌ಶಿಪ್' ನಡೆಯಲಿದೆ.
ಫೆ. 6 ರಂದು ಬೆಳಗ್ಗೆ 9ಕ್ಕೆ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸುವರು. ಕ್ರೀಡಾ ಸಚಿವ ಕೆ. ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸುವರು. ಆರೋಗ್ಯ ಸಚಿವ ಯು.ಟಿ. ಖಾದರ್, ಮಹಾರಾಷ್ಟ್ರ ಶಾಸಕ ಡಾ. ಜಿತೇಂದ್ರ ಅವ್ಹಾಡ್, ಸಂಸದ ನಳಿನ್ ಕುಮಾರ್ ಕಟೀಲ್, ಮೋಕ್ಷ ಯುಗ್ ಅಕ್ಸೆಸ್ ಇಂಡಿಯಾ ಲಿಮಿಟೆಡ್ ಮುಖ್ಯಸ್ಥ ಹರ್ಷ ಮೈಲಿ, ಶಾಸಕರಾದ ಜೆ.ಆರ್.ಲೋಬೊ, ವಸಂತ್ ಬಂಗೇರ, ಮೈದಿನ್ ಬಾವ ಪಾಲ್ಗೊಳ್ಳುವರು ಎಂದು ಸಂಘಟನಾ ಸಮಿತಿ ಅಧ್ಯಕ್ಷ ಕೆ. ತೇಜೋಮಯ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ದೇಶದ 21 ರಾಜ್ಯದಿಂದ 1,200 ಪುರುಷರು, 300 ಮಹಿಳೆಯರು ಸ್ಪರ್ಧೆಯಲ್ಲಿ ಪಾಲ್ಗೊಳ್ಳುವರು. 30 ರಿಂದ 80 ವರ್ಷ ವಯೋವಾನದವರು ಕ್ರೀಡೆಯಲ್ಲಿ ಸ್ಪರ್ಧಿಸುತ್ತಾರೆ.
ಫೆ. 9 ರಂದು ಸಂಜೆ 4.30ಕ್ಕೆ ಸಮಾರೋಪದಲ್ಲಿ ಕ್ರೀಡಾ ಸಚಿವ ಕೆ. ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸುವರು. ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ, ಬಂಟರ ಯಾನೆ ನಾಡವರ ಸಂಘ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಕ್ರೀಡಾ ಇಲಾಖೆ ನಿರ್ದೇಶಕ ವಿಕಾಸ ಕುಮಾರ್, ಇಂಡಿಯಾ ಮಾಸ್ಟರ್ಸ್ ಅತ್ಲೆಟಿಕ್ಸ್ ಉಪಾಧ್ಯಕ್ಷ ಡಿ.ಎಚ್. ಗುರು, ಕರ್ನಾಟಕ ಮಾಸ್ಟರ್ಸ್ ಅತ್ಲೆಟಿಕ್ಸ್ ಅಸೋಸಿಯೇಶನ್ ಅಧ್ಯಕ್ಷ ಟಿ.ಎಸ್. ಸತೀಶ್ ಪಾಲ್ಗೊಳ್ಳುವರು ಎಂದರು. ಸುದ್ದಿಗೋಷ್ಠಿಯಲ್ಲಿ ಇಂಡಿಯ ಮಾಸ್ಟರ್ ಅತ್ಲೆಟಿಕ್ಸ್ ಕಾರ್ಯದರ್ಶಿ ಜೆರಾಲ್ಡ್ ಡಿಸೋಜ, ದ.ಕ. ಮಾಸ್ಟರ್ಸ್ ಅತ್ಲೆಟಿಕ್ಸ್ ಅಸೋಸಿಯೇಶನ್ ಅಧ್ಯಕ್ಷ ಕೆ.ಎಸ್. ಕೋದಂಡರಾಮೆ ಗೌಡ ಇದ್ದರು.