ಕಾಲೇಜಿನಲ್ಲಿದ್ದಾಗಲೇ ಚಳುವಳಿಯಲ್ಲಿ ಭಾಗಿ..
ಮೂಲ್ಕಿ: ರಾಮರಾವ್ ಅವರು 1942ರಲ್ಲಿ ಮಂಗಳೂರಿನ ಸೈಂಟ್ ಎಲೋಶಿಯಸ್ ಕಾಲೇಜಿನಲ್ಲಿ ಬಿಎ ವ್ಯಾಸಂಗ ಮಾಡುತ್ತಿದ್ದಾಗ ಕಾರ್ನಾಡು ಸದಾಶಿವ ರಾಯರಿಂದ ಪ್ರೇರಣೆಗೊಂಡು ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಪಾಲ್ಗೊಂಡು ಆರು ತಿಂಗಳ ಕಾಲ ಜೈಲಿನಲ್ಲಿ ಕಠಿಣ ಸಜೆ ಅನುಭವಿಸಿದ್ದರು. ಜೈಲುವಾಸದ ಬಳಿಕ ಮತ್ತೆ ವಿದ್ಯಾಭ್ಯಾಸ ಮುಂದುವರಿಸುವ ನಿಟ್ಟಿನಲ್ಲಿ ಮಂಗಳೂರಿನ ಕಾಲೇಜಿಗೆ ಸೇರಲು ಬಂದಾಗ ಕಾಲೇಜಿಗೆ ಸೇರಿಸಲು ಪ್ರಾಚಾರ್ಯರು ಅವಕಾಶ ನೀಡಲಿಲ್ಲ. ಬಳಿಕ ದೇಶಕ್ಕೆ ಸ್ವಾತಂತ್ರ್ಯ ಸಿಗುವವರೆಗೆ ಪೊಲೀಸರ ಕಣ್ತಪ್ಪಿಸಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ್ದರು.
ಸಂತಾಪ: ರಾಮರಾವ್ ನಿಧನಕ್ಕೆ ಸಂಸದ ನಳಿನ್ ಕುಮಾರ್ ಕಟೀಲು, ರಾಜ್ಯ ಸಚಿವ ಕೆ. ಅಭಯಚಂದ್ರ ಜೈನ್, ವಿನಯ ಕುಮಾರ್ ಸೊರಕೆ, ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಕೆ. ಭುವನಾಭಿರಾಮ ಉಡುಪ, ಬೆಂಗಳೂರಿನ ಆರ್.ಟಿ. ನಗರದ ಶ್ರೀಚಂದ್ರಶೇಖರ ಸ್ವಾಮೀಜಿ, ಕೆ. ಭುವನಾಭಿರಾಮ ಉಡುಪ ಸಂತಾಪ ವ್ಯಕ್ತಪಡಿಸಿದ್ದಾರೆ.