ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

'ಟೀಮ್ ನಿಟ್ಟೆ'ಯ ಆಲ್ ಟೆರಾಯಿನ್ ವಾಹನ ಅನಾವರಣ

Mainashree
Updated On : 4 Feb 2014, 10:18 am

ಉಡುಪಿ: ಫೆ.20ರಂದು ಮಧ್ಯಪ್ರದೇಶದ ಇಂದೋರ್‌ನಲ್ಲಿ ಸೊಸೈಟಿ ಆಫ್ ಆಟೋಮೆಟಿವ್ ಎಂಜಿನಿಯರಿಂಗ್ ಇಂಡಿಯಾ ಆಯೋಜಿಸಿರುವ ರಾಷ್ಟ್ರ ಮಟ್ಟದ 'ಆಫ್ ರೋಡ್ ಬಾಜಾ- 2014' ಎಂಬ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿಯೇ ನಡೆಯಲಿರುವ ರೇಸಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಲು ನಿಟ್ಟೆ ಎಂಜಿನಿಯರಿಂಗ್ ಕಾಲೇಜಿನ ಆಲ್ ಟೆರಾಯಿನ್ ವಾಹನವನ್ನು ಸೋಮವಾರ ನಿಟ್ಟೆ ವಿ.ವಿ. ಕುಲಪತಿ ಎನ್. ವಿನಯ್ ಹೆಗ್ಡೆ ಅನಾವರಣಗೊಳಿಸಿದರು.
ಸುಮಾರು ರು. 4.50 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಆಲ್ ಟೆರಾಯಿನ್ ವಾಹನವನ್ನು ಟೀಮ್ ನಿಟ್ಟೆ (ಎಂಜಿನಿರಿಂಗ್ ಕಾಲೇಜಿನ 22 ಮಂದಿ ಮೆಕ್ಯಾನಿಕಲ್, ಇಲೆಕ್ಟ್ರಿಕಲ್ ಆಂಡ್ ಎಲೆಕ್ಟ್ರಾನಿಕ್ಸ್ ಮತ್ತು ಒಬ್ಬ ಕಂಪ್ಯೂಟರ್ ಎಂಜಿನಿರಿಂಗ್ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 25 ಮಂದಿ ವಿದ್ಯಾರ್ಥಿಗಳು) ವಿನ್ಯಾಸ ಮಾಡಿದ್ದಾರೆ. ಅವರಿಗೆ ಕಾಲೇಜಿನ ಉಪನ್ಯಾಸಕರಾದ ಪವನ್ ವಿ.ಪಿ., ಡಾ. ಪರಶುರಾಮನ್ ಮತ್ತು ಗ್ರೈನಾಲ್ಡ್ ಡಿಮೆಲ್ಲೋ ಮಾರ್ಗದರ್ಶನ ಮಾಡಿದ್ದಾರೆ.
ಸುಲಭವಾಗಿ ಬೆಟ್ಟಗುಡ್ಡ ಇತ್ಯಾದಿ ಕಠಿಣ ಪರಿಸರದಲ್ಲಿ ಚಲಿಸುವಂತೆ ವಿನ್ಯಾಸಗೊಳಿಸಲಾದ ಈ ವಾಹನವನ್ನು ಟೀಮ್ ನಿಟ್ಟೆ  2012ರಲ್ಲಿಯೇ ವಿನ್ಯಾಸಗೊಳಿಸಿತ್ತು. 2013ರಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರೂ ಅಂತಿಮ ಸ್ಪರ್ಧೆಗೆ ಆಯ್ಕೆಯಾಗಿರಲಿಲ್ಲ. ಇದೀಗ ಈ ವಾಹನ ಅಂತಿಮ ಸ್ಪರ್ಧೆಗೆ ಆಯ್ಕೆಯಾಗಿದ್ದು, ಈ ವಿದ್ಯಾರ್ಥಿಗಳನ್ನು ವಿನಯ್ ಹೆಗ್ಡೆ ಅಭಿನಂದಿಸಿದರು.ಕಾಲೇಜಿನ ಪ್ರಾಂಶುಪಾಲ ಡಾ. ನಿರಂಜನ ಎಸ್. ಚಿಪ್ಳೂಣ್ಕರ್, ಸಂಶೋಧನೆ- ಆಭಿವೃದ್ಧಿ ಡೀನ್ ಡಾ. ಸುದೇಶ್ ಬೇಕಲ್, ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಡಾ. ಸುಬ್ರಹ್ಮಣ್ಯ ಭಟ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement