ಟ್ಯಾಪ್ಮಿಯ 4 ವಿದ್ಯಾರ್ಥಿಗಳಿಗೆ ರು. 47 ಲಕ್ಷ ವೇತನ ಉದ್ಯೋಗ
ಮಣಿಪಾಲ: ಇಲ್ಲಿನ ಟಿ.ಎ. ಪೈ ಮ್ಯಾನೆಜ್ಮೆಂಟ್ ಇನ್ಸ್ಟಿಟ್ಯೂಟ್ನ 4 ಮಂದಿ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಮಟ್ಟದ ಉದ್ಯೋಗ ಲಭಿಸಿದೆ. ವಿಶ್ವಪ್ರಸಿದ್ಧ 'ಇತಿಹಾದ್ ಏರ್ವೇಸ್' ಸಂಸ್ಥೆಗೆ ಬಂದು ಈ ವಿದ್ಯಾರ್ಥಿಗಳ ಸಂದರ್ಶನ ನಡೆಸಿ ಉದ್ಯೋಗ ನೀಡಿದೆ. ಮಾತ್ರವಲ್ಲ, ಒಬ್ಬೊಬ್ಬರಿಗೂ ವಾರ್ಷಿಕ ರು. 47.09 ಲಕ್ಷ ವೇತನವನ್ನೂ ನಿಗದಿಪಡಿಸಿದೆ.
ಅಲ್ಲದೆ, ಈ ಬಾರಿ ಎಫ್ಎಂಸಿಜಿ, ಇನ್ಶುರೆನ್ಸ್, ಐಟಿ, ಇಕಾಮರ್ಸ್, ಟೆಲಿಕಾಂ, ಬ್ಯಾಂಕಿಂಗ್, ಟೆಕ್ಸ್ಟೈಲ್ ಇತ್ಯಾದಿ ಕ್ಷೇತ್ರಗಳಿಂದಲೂ ಅನೇಕ ಕಂಪೆನಿಗಳು ಈ ಕ್ಯಾಂಪಸ್ ಇಂಟರ್ವ್ಯೂನಲ್ಲಿ ಭಾಗವಹಿಸಿ ಅನೇಕ ಮಂದಿ ವಿದ್ಯಾರ್ಥಿಗಳಿಗೆ ಉದ್ಯೋಗಕ್ಕೆ ಆಹ್ವಾನ ನೀಡಿವೆ.
ಹಿಂದಿನ ವರ್ಷಗಳಿಗಿಂತ ಈ ವರ್ಷ ಆಗಮಿಸಿದ್ದ ಕಂಪೆನಿಗಳ ಸಂಖ್ಯೆ ಹೆಚ್ಚಿತ್ತು. ಇದು ಕಾಲೇಜಿನ ಶಿಕ್ಷಣದ ಗುಣಮಟ್ಟಕ್ಕೆ ಸಂದ ಗೌರವ ಎಂದು ಕಾಲೇಜಿನ ಡೀನ್ ಡಾ. ಚೌದುರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.