ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಮದ್ಯ, ಮಾದಕ ವಸ್ತು ತೊಡಕು: ಪಾಯಸ್

Mainashree
Updated On : 7 Feb 2014, 9:59 am

ಉಡುಪಿ: ಮದ್ಯಪಾನ ಮತ್ತು ಮಾದಕ ವಸ್ತುಗಳು ಆರೋಗ್ಯವಂತ ಸಮಾಜಕ್ಕೆ ಬಹುದೊಡ್ಡ ಶತ್ರು. ಈ ವ್ಯಸನಗಳಿಂದ ನಮ್ಮ ಯುವ ಸಂಪತ್ತು ನಾಶವಾಗುತ್ತಿದೆ, ಬಲಿಷ್ಠ ಯುವ ಭಾರತದ ನಿರ್ಮಾಣಕ್ಕೆ ಈ ಮದ್ಯ-ಮಾದಕ ವಸ್ತುಗಳು ಬಹಳ ದೊಡ್ಡ ತೊಡಕು ಎಂದು ಕರ್ನಾಟಕ ಜನಜಾಗೃತಿ ವೇದಿಕೆ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್  ಆತಂಕ ವ್ಯಕ್ತಪಡಿಸಿದ್ದಾರೆ.
ಬುಧವಾರ ಬೆಳ್ಮಣ್‌ನ ಸಂತ ಜೋಸೆಫ್ ಶಾಲೆ ಸಭಾಂಗಣದಲ್ಲಿ ವಾರ್ತಾ ಇಲಾಖೆ, ರಾಜ್ಯ ಮದ್ಯಪಾನ ಸಂಯಮ ಮಂಡಳಿ ಆಯೋಜಿಸಿದ 'ಮದ್ಯಪಾನ ಮತ್ತು ಮಾದಕ ವಸ್ತುಗಳ ತಡೆಗಟ್ಟುವಿಕೆ' ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಅಪರಾಧಕ್ಕೆ ಪ್ರೇರಕ: ನಮ್ಮ ಸುತ್ತಲೂ ನಡೆಯುವ ಅಪರಾಧಗಳಿಗೆ ಶೇ. 80ರಷ್ಟು ಮದ್ಯಪಾನವೇ ಕಾರಣ. ಇದಕ್ಕೆ ಪೂರಕವೆಂಬಂತೆ ಮದ್ಯಪಾನದತ್ತ ಯುವಕರನ್ನು ಆಕರ್ಷಿಸುವಲ್ಲಿ ಜಾಹೀರಾತುಗಳು ಪ್ರಮುಖ ಪಾತ್ರ ವಹಿಸುತ್ತಿವೆ. ನಮ್ಮ ಯುವಕರಿಗೆ ಒಳ್ಳೆಯ ಚಟ ಹಾಗೂ ದುಶ್ಚಟಗಳ ಮಧ್ಯೆ ಇರುವ ಅಂತರ ತಿಳಿಸಿ, ಜೀವನದಲ್ಲಿ ಉತ್ತಮವಾದುದನ್ನು ಅಳವಡಿಸುವಂತೆ ಮಾಡಬೇಕಾಗ ಅನಿವಾರ್ಯತೆ ಇಂದು ಬಂದೊದಗಿದೆ ಎಂದು ಅವರು ಅಭಿಪ್ರಾಯಪಟ್ಟರು.  ಸಂತ ಜೋಸೆಫ್ ವಿದ್ಯಾಸಂಸ್ಥೆಗಳ ಸಂಚಾಲಕ ರೆ. ಫಾ. ಲಾರೆನ್ಸ್ ಬಿ.ಡಿ'ಸೋಜ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಕೆ. ಸ್ವಾಗತಿಸಿದರು. ಸಂತ ಜೋಸೆಫ್ ಶಾಲೆ ಮುಖ್ಯ ಶಿಕ್ಷಕಿ ಸಿಸ್ಟರ್ ಮೋನಿಕಾ ಹಾಗೂ ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕಿ ಜೆನೆಟ್ ಡಿ'ಸೋಜ ಇದ್ದರು. ಮದ್ಯಮುಕ್ತ ಜೀವನ ನಡೆಸುತ್ತಿರುವ ನಾರಾಯಣ ಪಾಣರ ಅವರನ್ನು ಗುರುತಿಸಿ ಗೌರವಿಸಲಾಯಿತು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ  ಬೆಳ್ಮಣ್ ವಲಯ ಮೇಲ್ವಿಚಾರಕ ವಾಸುದೇವ ನಾಯಕ ಅವರು ಪಾಣರ ಅವರನ್ನು ಪರಿಚಯಿಸಿದರು.
ಶಿಕ್ಷಕ ಬಿ ಪುಂಡಲೀಕ ಮರಾಠೆ ನಿರೂಪಿಸಿದರು.  ವಿದ್ಯಾರ್ಥಿಗಳಿಗೆ ಚಲನಚಿತ್ರ ಪ್ರದರ್ಶನ ಮತ್ತು ಮಾಹಿತಿ ಕರಪತ್ರಗಳನ್ನು ವಿತರಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement