ನಿಟ್ಟೆ ಕಾಲೇಜಿಗೆ ಸಂಶೋಧನಾ ಪ್ರಶಸ್ತಿ
ನಿಟ್ಟೆ: ಭಾರತೀಯ ಯಂತ್ರ ಸಾಧನಗಳ ತಯಾರಕರ ಒಕ್ಕೂಟ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಯಂತ್ರ ಸಾಧನಗಳ ಪ್ರದರ್ಶನದೊಂದಿಗೆ ಆಯೋಜಿಸಲಾದ ಶೈಕ್ಷಣಿಕ ಸಂಶೋಧನಾ ಪ್ರದರ್ಶನದಲ್ಲಿ ನಿಟ್ಟೆ ಎಂಜಿನಿಯರಿಂಗ್ ಕಾಲೇಜಿನ ವತಿಯಿಂದ ಪ್ರದರ್ಶಿದ ಡೆವೆಲಪ್ಮೆಂಟ್ ಆಫ್ ಮೈಕ್ರೋ ಇಲೆಕ್ಟ್ರೋ-ಡಿಸ್ ಚಾರ್ಜ್ ಮಿಶಿನ್ ವಿದ್ ಪಿಜೋಆಕ್ಚುವೇಟೆಡ್ ಟೂಲ್ ಫೀಡ್ ಸಿಸ್ಟಮ್ ಎಂಬ ಸಂಶೋಧನಾ ಕಾರ್ಯಕ್ಕೆ 5ನೇ ಶ್ರೇಷ್ಠ ಸಂಶೋಧನಾ ಪ್ರಶಸ್ತಿ ಲಭಿಸಿರುತ್ತದೆ. ಈ ಪ್ರದರ್ಶನದಲ್ಲಿ ರಾಷ್ಟ್ರ ಮಟ್ಟದ ಪ್ರತಿಷ್ಠಿತ 24 ಸಂಸ್ಥೆಗಳು ಭಾಗವಹಿಸಿದ್ದವು. ಈ ಯಂತ್ರ ಸಾಧನವನ್ನು ಯಾಂತ್ರಿಕ ವಿಭಾಗದ ಪ್ರಾಂಶುಪಾಲ ಡಾ. ಮುರಳೀಧರ್, ಟಿ. ಆರ್. ವೇಣುಗೋಪಾಲ್ ಹಾಗೂ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಡಾ. ರತ್ನಮಾಲಾ ಎಂ. ರಾವ್ ಅವರು ಜಂಟಿಯಾಗಿ ಆವಿಷ್ಕರಿಸಿದ್ದಾರೆ. ಈ ಸಂಶೋಧನೆಯನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ನಿಟ್ಟೆ ವಿದ್ಯಾ ಸಂಸ್ಥೆಯು ಜಂಟಿಯಾಗಿ ಪ್ರಾಯೋಜಿಸಿವೆ.