ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಸಂಗೀತ ತ್ರಿಮೂರ್ತಿ ಉತ್ಸವ ಸಮಾರೋಪ

Rashmi Kasaragodu
Updated On : 12 Feb 2014, 3:10 am

ಉಡುಪಿ:  ಉಡುಪಿ ರಾಗಧನ ಸಂಸ್ಥೆಯ ಬೆಳ್ಳಿಹಬ್ಬ ಸಂಭ್ರಮಾಚರಣೆ ಪ್ರಯುಕ್ತ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಹಮ್ಮಿಕೊಂಡ ಪುರಂದರ ದಾಸರ ಮತ್ತು ಸಂಗೀತ ತ್ರಿಮೂರ್ತಿ ಉತ್ಸವದ ಸಮಾರೋಪ ಸಮಾರಂಭ ಭಾನುವಾರ ನಡೆಯಿತು.
ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಮಾತನಾಡಿ, ಮಾನವನಿಗೆ ಸುಖ, ಶಾಂತಿ ಹಾಗೂ ನೆಮ್ಮದಿ ನೀಡುವ ಶಕ್ತಿ ಸಂಗೀತಕ್ಕಿದೆ. ಅಂತಹ ಅದ್ಭುತ ಪರಂಪರೆಯನ್ನು ಹಿರಿಯರು ನಮಗಾಗಿ ಬಿಟ್ಟು ಹೋಗಿದ್ದಾರೆ. ಅದನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಕುಂದಾಪುರದ ಸಂಗೀತ ಭಾರತಿ ಟ್ರಸ್ಟ್‌ನ ಯು.ಎಸ್. ಶೆಣೈ, ಉಡುಪಿಯ ಸಂಗೀತ ಸಭಾದ ಅಜಿತ್ ಪೈ, ಪರ್ಕಳದ ಸರಿಗಮ ಭಾರತಿಯ ಉಮಾ ಉದಯ್ ಶಂಕರ್, ಮಂಗಳೂರು ಸಂಗೀತ ಪರಿಷತ್‌ನ ಸಿ.ಆರ್. ಬಲ್ಲಾಳ್,  ಮಣಿಕೃಷ್ಣ ಸ್ವಾಮಿ ಅಕಾಡೆಮಿಯ ನಿತ್ಯಾನಂದ ರಾವ್, ಕಾರ್ಕಳದ ಶಾಸ್ತ್ರೀಯ ಸಂಗೀತ ಸಭಾದ ಪ್ರಕಾಶ್ ಶೆಣೈ, ಪುತ್ತೂರಿನ ಸುನಾದ ವಿದ್ಯಾಲಯದ ಕಾಂಚನ್ ಈಶ್ವರ್ ಭಟ್ ಅವರನ್ನು ಸನ್ಮಾನಿಸಲಾಯಿತು.
ರಾಗಧನ ಸಂಸ್ಥೆ ಅಧ್ಯಕ್ಷ ಎ. ಈಶ್ವರಯ್ಯ ಅಧ್ಯಕ್ಷತೆ ವಹಿಸಿದ್ದರು. ಚೆನ್ನೈಯ ವಿಮರ್ಶಕಿ ಗೌರಿ ರಾಮನಾರಾಯಣನ್, ಸಂಸ್ಥೆಯ ಖಜಾಂಚಿ ಪ್ರೊ.ಕೆ. ಸದಾಶಿವ ರಾಮ್ ಇದ್ದರು.
ರಂಜನಿ ಸಂಸ್ಮರಣೆಯನ್ನು ಚೆನ್ನೈನ ಶ್ರುತಿ ನಿಯತಕಾಲಿಕದ ಸಂಪಾದಕ ವಿ. ರಾಮನಾರಾಯಣ್ ಮಾಡಿದರು.
ಕಾರ್ಯದರ್ಶಿ ಪ್ರೊ.ವಿ. ಅರವಿಂದ ಹೆಬ್ಬಾರ್ ಪ್ರಾಸ್ತಾವಿಕ ಮಾತನಾಡಿದರು. ಶಶಿಧರ ಮಾಸ್ತಿಬೈಲ್ ಸ್ವಾಗತಿಸಿದರು. ವಾಸುದೇವ ಭಟ್ ನಿರೂಪಿಸಿದರು.
ನಂತರ ನಂದಿನಿ ಈಶ್ವರ ನಿರ್ದೇಶಿಸಿದ ಮೈಸೂರು ರಾಸವೃಂದ ಕಲಾವಿದರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement