ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

'ಹರಕೆ ಹೇಳಿ ನಾಟಕ ಆಡಿಸುವ ದಿನ ಬರಲಿ'

Rashmi Kasaragodu
Updated On : 12 Feb 2014, 3:10 am

ಉಡುಪಿ: ಗ್ರಾಮೀಣ ಪ್ರದೇಶದಲ್ಲಿ ಹರಕೆ ಹೇಳಿ ಯಕ್ಷಗಾನ ಪ್ರಸಂಗಗಳನ್ನು ಆಡಿಸುವ ಪದ್ಧತಿ ಇದೆ. ಅದೇ ರೀತಿ ನಾಟಕಗಳನ್ನು ಕೂಡ ಆಡಿಸುವ ದಿನಗಳು ಬರಬೇಕಾಗಿದೆ ಎಂದು ಮಕ್ಕಳ ರಂಗಭೂಮಿ ತಜ್ಞ ಐ.ಕೆ. ಬೊಳುವಾರು ಆಶಿಸಿದ್ದಾರೆ.
ಇಲ್ಲಿನ ಪಟ್ಲದಲ್ಲಿ ಭೂಮಿಗೀತ ಸಾಂಸ್ಕೃತಿಕ ವೇದಿಕೆ ವತಿಯಿಂದ ನಡೆದ 2ನೇ ವರ್ಷದ 3 ದಿನಗಳ 'ರಂಗಹಬ್ಬ' ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ರಂಗಭೂಮಿಗೆ ಅಗಾಧವಾದ ಸಾಧ್ಯತೆಗಳಿವೆ. ಜಾತಿ- ಧರ್ಮಗಳನ್ನು ಮೀರಿ ನಿಂತು ಒಂದು ಊರಿನ ಕಷ್ಟ, ಸಂಕಷ್ಟಗಳಿಗೆ ಸ್ಪಂದಿಸುವ, ಉತ್ತರ ನೀಡುವ ಸಾಮರ್ಥ್ಯ ಅದಕ್ಕಿದೆ. ಈ ಕಾರಣದಿಂದ ಇಂದು ಒಳಗೊಳಗೆ ಕುದಿಯುತ್ತಿರುವ ಗ್ರಾಮೀಣ ಪ್ರದೇಶಗಳಲ್ಲಿ ರಂಗಭೂಮಿಯ ಚಟುವಟಿಕೆಗಳು ಹೆಚ್ಚಾಗಬೇಕಾಗಿದೆ ಎಂದವರು ಹೇಳಿದರು.
ಸ್ಥಳೀಯ ರೂರಲ್ ಎಜ್ಯುಕೇಶನ್ ಸೊಸೈಟಿ ಕಾರ್ಯದರ್ಶಿ ಅಣ್ಣಯ್ಯ ನಾಯಕ್ ಪಟ್ಲ ಮಾತನಾಡಿ, ಬದುಕಿನಲ್ಲಿ ಬದಲಾವಣೆಗಳ ಜೊತೆಗೆ ಸಮಸ್ಯೆಗಳೂ ಬದಲಾಗುತ್ತಿವೆ. ಅದಕ್ಕೆ ತಕ್ಕಂತೆ ರಂಗಭೂಮಿಯೂ ಬದಲಾಗುತ್ತಿದೆ. ಇದು ನಿರೀಕ್ಷಿತ ಕೂಡ ಎಂದರು.
ಅಧ್ಯಕ್ಷತೆ ವಹಿಸಿದ್ದ ಭೂಮಿಗೀತದ ಅಧ್ಯಕ್ಷ ಎಚ್.ಎನ್. ನಟರಾಜ್ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯದರ್ಶಿ ಸುಧೀರ್ ಕುಮಾರ್ ವಂದಿಸಿದರು. ಸಮಾರಂಭದ ನಂತರ ಭೂಮಿಗೀತ ವೇದಿಕೆಯ 'ವಿನಶನ' ತುಳು ನಾಟಕ ಪ್ರದರ್ಶನಗೊಂಡಿತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement