ಭಾಷೆ ತಾಯಿ ಸ್ವರೂಪಿ: ಚಿನ್ನಾ
ಉಡುಪಿ: ಕುಕ್ಕಿಕಟ್ಟೆಯ ಪ್ರದೀಪ್ ಗೋಕುಲ್ದಾಸ್ ಕಾಮತ್ ಅವರ ನಿವಾಸದಲ್ಲಿ 72ನೇ 'ಘರ್ ಘರ್ ಕೊಂಕಣಿ' ಕಾರ್ಯಕ್ರಮ ಭಾನುವಾರ ನಡೆಯಿತು.
ಕೊಂಕಣಿ ಅಕಾಡೆಮಿ ಮಾಜಿ ಅಧ್ಯಕ್ಷ ಕಾಸರಗೋಡು ಚಿನ್ನಾ ಕಾರ್ಯಕ್ರಮವನ್ನು ಉದ್ಘಾಟಿಸಿ, ಭಾಷೆ ಮತ್ತು ಸಂಸ್ಕೃತಿಯು ಶಾಶ್ವತ ನೆಲೆಯಲ್ಲಿ ಕೊಂಕಣಿ ಭಾಷೆಯನ್ನು ಬಳಸುವ ನಿಟ್ಟಿನಲ್ಲಿ ಘರ್ ಘರ್ ಕೊಂಕಣಿ ಕಾರ್ಯಕ್ರಮ ಪ್ರಾರಂಭಿಸಲಾಗಿದೆ. ಭಾಷೆಯು ತಾಯಿಯ ಸ್ವರೂಪವಾಗಿದೆ. ಕೊಂಕಣಿ ಭಾಷೆಗಾಗಿ ಹಚ್ಚಿದ ದೀಪ ನಿರಂತರ ಬೆಳಗಲಿ ಎಂದು ಕರೆ ನೀಡಿದರು.
ಸಮಾರಂಭದಲ್ಲಿ ಸ್ಥಳೀಯರಾದ ವಿಶ್ವನಾಥ ಶೆಣೈ, ಅಶೋಕ್ ಕಾಮತ್, ರವೀಂದ್ರ ನಾಯಕ್, ಪ್ರದೀಪ್ ಕಾಮತ್, ಜ್ಯೋತಿ ಕಾಮತ್, ರಾಮ್ದಾಸ್ ಕಾಮತ್ ಮತ್ತು ಪ್ರಶಾಂತ್ ಕಾಮತ್ ಇದ್ದರು.
ನಂತರ 74ನೇ ಘರ್ ಘರ್ ಕೊಂಕಣಿ ಕಾರ್ಯಕ್ರಮ ಉಡುಪಿಯ ಮೀನು ಮಾರ್ಕೆಟ್ ಬಳಿ ಪಾಂಡುರಂಗ ಪೈ ನಿವಾಸದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಕಾಸರಗೋಡು ಚಿನ್ನಾ, ಪಾಂಡುರಂಗ ಪೈ, ಶಶಿಭೂಷಣ್ ಕಿಣಿ, ಅರವಿಂದ ಪಾಂಡುರಂಗ ಪೈ, ವಿದ್ಯಾ ಆರ್. ಪೈ ಇದ್ದರು. ಮಕ್ಕಳಿಂದ ಕೊಂಕಣಿ ಭಾಷೆಯ ಕವನ, ಕಥೆ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.