ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಕಡ್ಡಾಯ ಶಿಕ್ಷಣ ಅಲ್ಪಸಂಖ್ಯಾತ ಶಾಲೆಗೂ ಅನ್ವಯವಾಗಲಿ: ನಾಯಕ್

Vishwanath S
Updated On : 22 Feb 2014, 11:07 am

ಮಣಿಪಾಲ:  ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಮಸೂದೆ ಅನುದಾನರಹಿತ ಅಲ್ಪಸಂಖ್ಯಾತ ಶಾಲೆಗಳಿಗೂ ಅನ್ವಯವಾದಾಗ ಮಾತ್ರ ಸಾಮಾಜಿಕ ನ್ಯಾಯ ಲಭಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ಜಿ.ಪಂ. ಅಧ್ಯಕ್ಷ ಉಪೇಂದ್ರ ನಾಯಕ್ ಅಭಿಪ್ರಾಯಪಟ್ಟಿದ್ದಾರೆ.
ಅವರು ಸ್ಥಳೀಯ ಪ್ರಾಧಿಕಾರಗಳ ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳಿಗೆ ಇಲ್ಲಿನ ಜಿ.ಪಂ. ಸಭಾಂಗಣದಲ್ಲಿ ಒಂದು ದಿನದ ಶಿಕ್ಷಣದ ಹಕ್ಕು(ಆರ್.ಟಿ.ಇ.) ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕನಗವಲ್ಲಿ, ಕಡ್ಡಾಯ ಶಿಕ್ಷಣ ಮಸೂದೆ ಜಾರಿಗೊಳಿಸುವ ಸನ್ನಿವೇಶದಲ್ಲಿ ಉಡುಪಿ ಜಿಲ್ಲೆಯಲ್ಲಿ ಯಾವುದೇ ದೂರುಗಳು ಬಾರದಂತೆ ಜಾಗ್ರತೆ ವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ರಾಜ್ಯ ಮಕ್ಕಳ ಹಕ್ಕುಗಳ ಅಯೋಗದ ಸದಸ್ಯೆ ವನಿತಾ ತೋರ್ವಿ, ಡಯೆಟ್‌ನ ಹಿರಿಯ ಉಪನ್ಯಾಸಕ ರಂಗದಾಮಪ್ಪ, ಶಿಕ್ಷಣಾಧಿಕಾರಿ ಅಶೋಕ ಕಾಮತ್ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.
ಜಿಪಂನ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಗಣಪತಿ ಶ್ರೀಯಾನ್, ಜಿ.ಪಂ.ಉಪಕಾರ್ಯದರ್ಶಿ ಪ್ರಾಣೇಶ ರಾವ್ ಇದ್ದರು. ವಿದ್ಯಾಂಗ ಉಪನಿರ್ದೇಶಕ ಎಸ್. ನಾಗೇಂದ್ರ ಮಧ್ಯಸ್ಥ ಸ್ವಾಗತಿಸಿದರು. ಡಯೆಟ್ ಪ್ರಾಚಾರ್ಯ ಶೇಖರ್ ವಂದಿಸಿದರು.
ಕಡ್ಡಾಯ ಶಿಕ್ಷಣ ಮಸೂದೆ ಅನುಷ್ಠಾನದಲ್ಲಿ ಅಥವಾ ಇನ್ನಿತರ ಮಕ್ಕಳ ಹಕ್ಕುಗಳ ಉಲ್ಲಂಘನೆ ನಡೆದ ಸಂದರ್ಭದಲ್ಲಿ ದೂರುಗಳನ್ನು ಸ್ವೀಕರಿಸಿ ಅವುಗಳನ್ನು ಪರಿಹರಿಸಲು ಜಿ.ಪಂ. ವ್ಯಾಪ್ತಿಯಲ್ಲಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಗೆ, ಅಂತೆಯೇ ನಗರಸಭೆ, ಪುಸಭೆಗಳ ವ್ಯಾಪ್ತಿಯಲ್ಲಿ ಆಯಾ ನಗರಪಾಲಿಕೆಗಳ ಸಾಮಾಜಿಕ ನ್ಯಾಯ ಸಮಿತಿಗಳಿಗೆ ಅಧಿಕಾರ ಪ್ರದತ್ತಗೊಳಿಸಿ ಸರ್ಕಾರ ನೀಡಿರುವ ಆದೇಶದ ಕುರಿತು ತರಬೇತಿಯಲ್ಲಿ ತಿಳಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement