ಕಾರ್ಕಳ: ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಾಲೋಚನೆ
ಕಾರ್ಕಳ: ಕಾರ್ಕಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಾಲೋಚನಾ ಸಭೆ ಇತ್ತೀಚೆಗೆ ರಾಜೀವಗಾಂಧಿ ಸಭಾಭವನದಲ್ಲಿ ನಡೆಯಿತು. ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಾಲಿನಿ ರೈ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಎಚ್. ಗೋಪಾಲ ಭಂಡಾರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ವೆರೋನಿಕಾ ಕರ್ನೋಲಿಯಾ ಹಾಗೂ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧಾಕರ ಕೋಟ್ಯಾನ್, ಕಾರ್ಕಳ ಪುರಸಭಾ ಅಧ್ಯಕ್ಷೆ ರೆಹಮತ್ ಎನ್. ಶೇಖ್, ಕೃಷಿ ಘಟಕದ ಅಧ್ಯಕ್ಷ ದಯಾನಂದ ಶೆಟ್ಟಿ ಹಾಗೂ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳಾದ ರೋಶನಿ, ಡಾ. ಸುನೀತಾ, ಜಿಲ್ಲಾ ಕಾಂಗ್ರೆಸ್ ಖಜಾಂಚಿ ಸುಪ್ರಿಯಾ ಪ್ರಮೋದ್ ಮಧ್ವರಾಜ್ ಇದ್ದರು.
ವೆರೋನಿಕಾ ಕರ್ನೋಲಿಯೋ ಅವರು ಮಾ. 1ರಂದು ಉಡುಪಿಯಲ್ಲಿ ನಡೆಯಲಿರುವ ಮಹಿಳಾ ಸಮಾವೇಶದ ಬಗ್ಗೆ ಮಾಹಿತಿ ನೀಡಿದರು.
ಮಾಲಿನಿ ರೈ ಪ್ರಾಸ್ತಾವಿಕ ಮಾತನಾಡಿದರು. ಪುರಸಭಾ ಸದಸ್ಯೆ ನಳಿನಿ ಆಚಾರ್ಯ ಸ್ವಾಗತಿಸಿದರು. ಶಾಲಿನಿ ಶೆಟ್ಟಿ ಕುಂಟಾಡಿ ವಂದಿಸಿದರು.
ವಿಜ್ಞಾಪನಾ ಪತ್ರಿಕೆ ಬಿಡುಗಡೆ
ಉಡುಪಿ: ಏ. 19ರಂದು ಇಲ್ಲಿನ ರಾಯಲ್ ಗಾರ್ಡನ್ನಲ್ಲಿ ನಡೆಸಲು ಉದ್ದೇಶಿಸಿರುವ ಗುಂಡಿಬೈಲಿನ ನಾಗಬನದ ಅಷ್ಟಪವಿತ್ರ ಶ್ರೀ ನಾಗಮಂಡಲೋತ್ಸವದ ವಿಜ್ಞಾಪನಾ ಪತ್ರಿಕೆಯನ್ನು ಸಮಿತಿ ಗೌರವಾಧ್ಯಕ್ಷ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆ ಇತ್ತೀಚಿಗೆ ಬಿಡುಗಡೆಗೊಳಿಸಿದರು. ಸಮಿತಿ ಕಾರ್ಯಧ್ಯಕ್ಷ ಗೋಕುಲ್ದಾಸ್ ಪೈ, ಖಜಾಂಚಿ ಎಚ್. ನಾಗರಾಜ ಭಟ್, ಉಪಾಧ್ಯಕ್ಷ ನಾಗರಾಜ ಪೈ, ಸಂಘಟನಾ ಕಾರ್ಯದರ್ಶಿ ಮೋಹನದಾಸ ಕಿಣಿ ಹಾಗೂ ಪ್ರಧಾನ ಕಾರ್ಯದರ್ಶಿ ವಿದ್ಯಾವಂತ ಆಚಾರ್ಯ ಇದ್ದರು.
ನಾಳೆ 'ಘರ್ ಘರ್ ಕೊಂಕಣಿ'
ಉಡುಪಿ: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಹಾಗೂ ನಟ ಕಾಸರಗೋಡು ಚಿನ್ನಾ ಅವರ ಸಾರಥ್ಯದ ಘರ್ ಘರ್ ಕೊಂಕಣಿ ಅಭಿಯಾನದ 75ರ ಸಂಭ್ರಮವನ್ನು ಫೆ.23ರಂದು ಇಲ್ಲಿನ ನ್ಯಾಯವಾದಿ ಲಕ್ಷ್ಮಣ್ ರಂಗನಾಥ ಶೆಣೈ ಅವರ ನಿವಾಸದಲ್ಲಿ ನಡೆಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇಂದು ಆಮ್ ಆದ್ಮಿ ಜಾಡುಯಾತ್ರೆ
ಉಡುಪಿ: ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ ದೇಶಾದ್ಯಂತ ಜಾಡುಯಾತ್ರೆ ಹಮ್ಮಿಕೊಂಡ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಆಮ್ ಆದ್ಮಿ ಪಕ್ಷ ಶನಿವಾರ ಬಿಗ್ ಬಜಾರ್ ಜೋಡುಕಟ್ಟೆಯಿಂದ ಸರ್ವಿಸ್ ಬಸ್ ನಿಲ್ದಾಣದ ಬಳಿಯ ಗಾಂಧಿವೃತ್ತದವರೆಗೆ ಜಾಡುಯಾತ್ರೆ ನಡೆಸಲಿದೆ. ದೇಶದ ಭ್ರಷ್ಟ ವ್ಯವಸ್ಥೆ ಹೋಗಲಾಡಿಸುವ ಸಲುವಾಗಿ ನಡೆಯುವ ಯಾತ್ರೆ ನಡೆಯಲಿದೆ ಎಂದು ಪಕ್ಷದ ಸಂಚಾಲಕ ಯತೀಶ್ ಕುಮಾರ್ ಕಟಪಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
25ರಂದು ಗಂಗೊಳ್ಳಿ ಗ್ರಾಮಸಭೆ
ಗಂಗೊಳ್ಳಿ: ಗಂಗೊಳ್ಳಿ ಗ್ರಾಮ ಪಂಚಾಯತಿಯ 2013-14ನೇ ಸಾಲಿನ ದ್ವಿತೀಯ ಗ್ರಾಮಸಭೆ ಹಾಗೂ ಎಂಜಿಆರ್ಎನ್ಇಜಿ ಸಭೆ 25ರಂದು ಗಂಗೊಳ್ಳಿಯ ಶ್ರೀ ವೀರೇಶ ಮಾಂಗಲ್ಯ ಮಂದಿರದಲ್ಲಿ ನಡೆಯಲಿದೆ. ಬೈಂದೂರು ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಪಿ.ಕೆ.ಬಸವಲಿಂಗನ ಗೌಡ ಸಭೆಯ ಮಾರ್ಗದರ್ಶಿ ಅಧಿಕಾರಿಯಾಗಿದ್ದಾರೆ ಎಂದು ಪಂಚಾಯಿತಿ ಪ್ರಕಟಣೆ ತಿಳಿಸಿದೆ.
ಕೊಡವೂರು: ಜೀರ್ಣೋದ್ಧಾರ ಸಮಿತಿ ಸಭೆ
ಉಡುಪಿ: ಮಹಾತೋಬಾರ ಕೊಡವೂರು ಶ್ರೀ ಶಂಕರನಾರಾಯಣ ದೇವಳದ ಜೀರ್ಣೋದ್ಧಾರ ಸಮಿತಿ ಸಭೆ ಭಾನುವಾರ ದೇವಳದಲ್ಲಿ ಜರುಗಿತು. ಫೆ. 27 ರಿಂದ ಮಾರ್ಚ್ 11ರ ವರೆಗೆ ನಡೆಯುವ ಬ್ರಹ್ಮಕಲಶೋತ್ಸವ ಹಾಗೂ ಜೀರ್ಣೋದ್ಧಾರಗಳ ಬಗ್ಗೆ ದೇವಳದ ಆಡಳಿತ ಮೊಕ್ತೇಸರ ಟಿ. ರಾಘವೇಂದ್ರ ರಾವ್ ಇದುವರೆಗಿನ ದೇವಳದ ಕಾಮಗಾರಿಯ ಪ್ರಗತಿ, ಖರ್ಚುವೆಚ್ಚಗಳು ಹಾಗೂ ಮುಂದಿನ ಕಾರ್ಯತಂತ್ರದ ಬಗ್ಗೆ ಸಭೆಗೆ ತಿಳಿಸಿದರು. ಸಹಮೊಕ್ತೇಸರರಾದ ಕೆ. ರಾಘವೇಂದ್ರ ಭಟ್, ಕಾಳು ಸೇರಿಗಾರ, ಕೆ.ಟಿ. ಪ್ರಸಾದ್, ಸುಧಾ ಉಳಿತ್ತಾಯ, ಉಮೇಶ್ ರಾವ್ ಇದ್ದರು.
ಸರ್ವೋತ್ತಮ ಸೇವಾ ಪುರಸ್ಕಾರ ಪ್ರದಾನ
ಉಡುಪಿ: ಇಲ್ಲಿನ ಎಂಜಿಎಂ ಕಾಲೇಜಿನ ಮೈದಾನದಲ್ಲಿ ಇತ್ತೀಚೆಗೆ ನಡೆದ ಉಡುಪಿ ಜಿಲ್ಲಾ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಅತ್ಯುತ್ತಮ ಗುಣಮಟ್ಟದ ಸೇವೆ ಸಲ್ಲಿಸಿದ ಉಡುಪಿ ಜಿಲ್ಲೆಯ ವಿವಿಧ ಇಲಾಖೆಗಳ ನೌಕರರನ್ನು ಗುರುತಿಸಿ ಸರ್ವೋತ್ತಮ ಸೇವಾ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಅವರು ಈ ಪುರಸ್ಕಾರಗಳನ್ನು ನೀಡಿದರು. ಜಿಲ್ಲಾಧಿಕಾರಿ ಡಾ.ಎಂ.ಟಿ. ರೇಜು, ಎಸ್ಪಿ ಡಾ. ಬೋರಲಿಂಗಯ್ಯ ಎಂ.ಬಿ. ಇದ್ದರು. ಪ್ರಶಸ್ತಿ ಪಡೆದವರು - ಡಾ. ದಮಯಂತಿ ಕೃಷ್ಣ ಮೋಹನ್ ಪ್ರಸೂತಿ ತಜ್ಞರು, ಉಡುಪಿಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ), ಡಾ. ಉದಯ ಶೆಟ್ಟಿ (ಪ್ರಭಾರ ಸಹಾಯಕ ಯೋಜನಾಧಿಕಾರಿ, ಯೋಜನಾ ಸಮನ್ವಯಾಧಿಕಾರಿ, ಜಿ.ಪಂ. ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ), ಚಂದ್ರಶೇಖರ ಶೆಟ್ಟಿ (ಸಹಾಯಕ ಕೃಷಿ ಅಧಿಕಾರಿ, ಕೃಷಿ ಇಲಾಖೆಯ ಕೋಟ ರೈತ ಸಂಪರ್ಕ ಕೇಂದ್ರ, ಯಶವಂತ ಕುಮಾರ್, ಪ್ರಥಮ ದರ್ಜೆ ಸಹಾಯಕರು, ಉಡುಪಿ ಜಿಲ್ಲಾಧಿಕಾರಿ ಕಚೇರಿ), ಶ್ಯಾಮರಾಯ್ ಗ್ರೂಪ್ ಡಿ ಸಿಬ್ಬಂದಿ, ಉಡುಪಿ ನಗರಸಭೆ)
ಕುಂಜಿಬೆಟ್ಟು ವಿದ್ಯಾರ್ಥಿಗಳಿಗೆ ಪ್ರಶಸ್ತಿ
ಉಡುಪಿ: ಮಣಿಪಾಲದ ಡಾ.ಟಿ.ಎಂ.ಎ ಪೈ ಪಾಲಿಟೆಕ್ನಿಕ್ ವತಿಯಿಂದ ನಡೆದ 'ಹಾರಿಝೋನ್' ಎಂಬ ಜಿಲ್ಲಾ ಮಟ್ಟದ ಕ್ರೀಡಾ ಸ್ಪರ್ಧೆಯ ಪದವಿ ವಿಭಾಗದ ವಾಲಿಬಾಲ್ ಸ್ಪರ್ಧೆಯಲ್ಲಿ ನಗರದ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿಗಳು ರನ್ನರ್ಸ್ ಅಪ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.