ತುಳು ಭಾಷೆ ಉಳಿವು ಅಗತ್ಯ: ಒಡಿಯೂರು ಶ್ರೀ
ಪುತ್ತೂರು: ತುಳುನಾಡಿನ ಸಂಸ್ಕೃತಿಯನ್ನು ಸಾಮಾಜಿಕವಾಗಿ ಅನಾವರಣಗೊಳಿಸುವ ನಿಟ್ಟಿನಲ್ಲಿ ತುಳುತೇರು ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಒಡಿಯೂರು ಗುರುದೇವದತ್ತ ಸಂಸ್ಥಾನಮ್ನ ಶ್ರೀಗುರುದೇವಾನಂದ ಸ್ವಾಮೀಜಿ ಹೇಳಿದ್ದಾರೆ.
ಗುರುವಾರ ಪುತ್ತೂರು ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನ ಮುಂಭಾಗದಲ್ಲಿ ನಡೆದ 'ಮೂಡಾಯಿ ತುಳುತೇರ್ ಎದುರ್ಕೊನುನ ಉಚ್ಚಯ' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ತುಳು ಭಾಷೆಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದರೊಂದಿಗೆ ಭಾಷೆಯ ಉಳಿವಿಗಾಗಿ ಪ್ರಯತ್ನ ನಡೆಯಬೇಕು ಎಂದರು. ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್, ಎ. ಕೃಷ್ಣಪ್ಪ ಪೂಜಾರಿ ಮಾತನಾಡಿದರು. ಶಾಸಕಿ ಶಕುಂತಳಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಮಾನಾಥ ಎ. ಕೋಟ್ಯಾನ್, ನನ್ಯ ಅಚ್ಚುತ ಮೂಡೆತ್ತಾಯ, ವಾಣಿ ಶ್ರೀಧರ್, ಪದ್ಮನಾಭ ಶೆಟ್ಟಿ, ಕುಂಬ್ರ ದುರ್ಗಾಪ್ರಸಾದ್ ರೈ, ಜಗದೀಶ ಶೆಟ್ಟಿ ನಲ್ಲಿಕಟ್ಟೆ, ಹರಿಣಾಕ್ಷಿ ಜೆ. ಶೆಟ್ಟಿ ನೆಲ್ಲಿಕಟ್ಟೆ, ಭಾಸ್ಕರ ಭಾರ್ಯ ಇದ್ದರು.