ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಗುಣಪಾಲಗೆ 'ದೇವಾಡಿಗ ವೈಭವ' ಸಾಧನಾ ಪ್ರಶಸ್ತಿ

Lingaraj Badiger
Updated On : 7 Jan 2014, 1:07 am

ಬೈಂದೂರು: ಇಲ್ಲಿನ ಬ್ಲೂಸ್ಟಾರ್ ಕ್ರಿಕೆಟ್ ಕ್ಲಬ್ ಮತ್ತು ದೇವಾಡಿಗ ಸಂಘದ ಆಶ್ರಯದಲ್ಲಿ ಜೆ.ಎನ್.ಆರ್. ಕಲಾ ಮಂದಿರದಲ್ಲಿ ನಡೆದ 'ದೇವಾಡಿಗ ವೈಭವ' ಕಾರ್ಯಕ್ರಮದಲ್ಲಿ ಮುಂಬೈಯ ಹಿರಿಯ ರಂಗಕರ್ಮಿ, ಲೇಖಕ ಉಡುಪಿ ಗುಣಪಾಲ ಅವರಿಗೆ 'ದೇವಾಡಿಗ ವೈಭವ-2013'ರ ಸಾಧನಾ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಮುಂಬೈ ಸಂಘದ ಅಧ್ಯಕ್ಷ ವಾಸು ದೇವಾಡಿಗ, ನಾರಾಯಣ ದೇವಾಡಿಗ ಬೈಂದೂರು, ಬಿ. ಜಿ. ಮೋಹನ್ ದಾಸ್, ಮುಲ್ಕಿ ಜಯಾನಂದ ದೇವಾಡಿಗ, ಶಾರದಾ ಬಿಜೂರು, ಡಾ. ಬಿ.ಎಸ್. ಸೇರಿಗಾರ್, ರಾಘವೇಂದ್ರ ಜಿ. ಮಣಿಪಾಲ, ಸುಂದರ ಮೊಯ್ಲಿ ಇದ್ದರು.

ಬಸ್ ಡಿಕ್ಕಿ; ಪಾದಚಾರಿ ಗಾಯ
ಕುಂದಾಪುರ: ವಡೇರಹೋಬಳಿ ಗ್ರಾಮದ ಬಸ್ರೂರು ಮೂರು ಕೈ ಬಳಿಯ ಐಸ್ಕ್ರೀಂ  ಅಂಗಡಿ ಎದುರು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಬಸ್ ಡಿಕ್ಕಿ ಹೊಡೆದು ಗಾಯಗೊಂಡ ಘಟನೆ ಭಾನುವಾರ ನಡೆದಿದೆ. ಗಾಯಗೊಂಡವರನ್ನು ಆನಂದ ಎಂದು ಗುರುತಿಸಲಾಗಿದೆ.
ಸಂಜೀವ ಶೆಟ್ಟಿ  ಅತಿ ವೇಗವಾಗಿ ಚಲಾಯಿಸಿಕೊಂಡು ಬಂದ ಬಸ್ ಪಾದಚಾರಿ ಆನಂದಗೆ ಡಿಕ್ಕಿಯಾಗಿದೆ. ಅವರು ರಸ್ತೆಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದು, ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement